ವಾಯು ವಿಹಾರದಲ್ಲಿದ್ದ ಗೃಹಿಣಿಗೆ ಲಾರಿ ಡಿಕ್ಕಿ, ಸಾವು

ಕಾಸರಗೋಡು : ಹೊಸ ದುರ್ಗ ಪಳಯಂಗಾಡಿ ಬಳಿ ಶುಕ್ರವಾರ ಮುಂಜಾನೆ ವಾಯುವಿಹಾರದಲ್ಲಿದ್ದ ಕೆ. ಸುಲೋಚನ (52) ಎಂಬ ಗೃಹಿಣಿಗೆ ಲಾರಿ ಢಿಕ್ಕಿ ಹೊಡೆದು, ಚಾಲಕ ನಿಲ್ಲಿಸದೆ ಪರಾರಿಯಾಗಿದ್ದನು.

ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ . ಪ್ರಕರಣ ಕೈಗೆತ್ತಿಕೊಂಡ ಪಳಯಂಗಾಡಿ ಪೊಲೀಸರು ಕಣ್ಣೂರಿನವರೆಗಿನ ಸುಮಾರು 30 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಜಾಲಾಡಿ, ಕಣ್ಣೂರಿನ ಖಾಸಗಿ ಆಸ್ಪತ್ರೆಯೊಂದರ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಅಪಘಾತವೆಸಗಿದ ಲಾರಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಮಲಪ್ಪುರಂ ಮೂಲದ ಚಾಲಕ ಕೆ. ಪ್ರವೀಣ್ (35) ಎಂಬಾತನನ್ನು ಪರಿಯಾರಂ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!