ಉಪ್ಪಳದಲ್ಲಿ ರೈಲು ಹಳಿ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಉಪ್ಪಳ : ಇಲ್ಲಿಯ ಉಪ್ಪಳ ಗೇಟ್ ಅಂಚಿಕಟ್ಟೆಯಲ್ಲಿ ಮಂಗಳೂರು ಮಾರ್ಗದ ರೈಲು ಹಳಿ ಸಮೀಪದ ಪೊದೆಗಳಲ್ಲಿ ಸುಮಾರು 55ರಿಂದ 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೈಲು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

​ಸ್ಥಳೀಯರು ಕೂಡಲೇ ಅವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಸಾಗಿಸಿದರಾದರೂ, ಮಾರ್ಗಮಧ್ಯೆ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದ್ದು, ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತರ ವಿವರಗಳು ಲಭ್ಯವಾಗಿಲ್ಲ.

SHARE
Loading spinner

One thought on “ಉಪ್ಪಳದಲ್ಲಿ ರೈಲು ಹಳಿ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ”

Leave a Reply

Your email address will not be published. Required fields are marked *

error: Content is protected !!