
ಕಾಸರಗೋಡು : ಹೊಸ ದುರ್ಗ ಪಳಯಂಗಾಡಿ ಬಳಿ ಶುಕ್ರವಾರ ಮುಂಜಾನೆ ವಾಯುವಿಹಾರದಲ್ಲಿದ್ದ ಕೆ. ಸುಲೋಚನ (52) ಎಂಬ ಗೃಹಿಣಿಗೆ ಲಾರಿ ಢಿಕ್ಕಿ ಹೊಡೆದು, ಚಾಲಕ ನಿಲ್ಲಿಸದೆ ಪರಾರಿಯಾಗಿದ್ದನು.

ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ . ಪ್ರಕರಣ ಕೈಗೆತ್ತಿಕೊಂಡ ಪಳಯಂಗಾಡಿ ಪೊಲೀಸರು ಕಣ್ಣೂರಿನವರೆಗಿನ ಸುಮಾರು 30 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಜಾಲಾಡಿ, ಕಣ್ಣೂರಿನ ಖಾಸಗಿ ಆಸ್ಪತ್ರೆಯೊಂದರ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಅಪಘಾತವೆಸಗಿದ ಲಾರಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಲಪ್ಪುರಂ ಮೂಲದ ಚಾಲಕ ಕೆ. ಪ್ರವೀಣ್ (35) ಎಂಬಾತನನ್ನು ಪರಿಯಾರಂ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.


