
ಕಾಸರಗೋಡು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತರಂಗ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಠದಲ್ಲಿ
ಜಗದ್ಗುರು ಶಂಕರಾಚಾರ್ಯ ಪೀಠ, ಎಡನೀರು ಸಂಸ್ಥಾನದ ಯತಿವರ್ಯರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯಹಸ್ತದಿಂದ ಬಿಡುಗಡೆಗೊಳಿಸಿದರು.

ಈ ಶುಭ ಸಮಾರಂಭದಲ್ಲಿ ಕುತ್ಯಾಳ ತರಬೇತಿ ಕೇಂದ್ರದ ಹಿರಿಯ ಸದಸ್ಯ ಡಾl ಕೆ. ಎನ್. ವೆಂಕಟ್ರಮಣ ಹೊಳ್ಳ ತರಬೇತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕಿಶೋರ್ ಕೂಡ್ಲು, ಕಾರ್ಯದರ್ಶಿ ಆಕಾಶ್ ಕೂಡ್ಲು, ಕೋಶಾಧಿಕಾರಿ ವಿಘ್ನೇಶ್ ಕಾರಂತ, ಸಂಚಾಲಕ ಅರ್ಜುನ್ ಕೂಡ್ಲು ಉಪಸ್ಥಿತರಿದ್ದರು.

ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ಎರಡು ದಿನಗಳ ಕಾಲ ‘ರಜತರಂಗ’ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.


