ರಾಷ್ಟ್ರಮಟ್ಟದ ಗಾಳಹಾಕುವ ಸ್ಪರ್ಧೆ: ನದಿ ತೀರ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ

​ಕಾಸರಗೋಡು: ಜಿಲ್ಲೆಯ ನದಿಗಳ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಉತ್ತೇಜಿಸಲು ‘ಕಾಸರಗೋಡು ಆಂಗ್ಲಿಂಗ್ ಚಾಂಪಿಯನ್ಸ್‌ಷಿಪ್-2026’ ರಾಷ್ಟ್ರಮಟ್ಟದ ಗಾಳಹಾಕುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ನವೆಂಬರ್ 15ರಂದು ಕುಂಬಳೆಯ ಆರಿಕ್ಕಾಡಿಯ ಶಿರಿಯ ನದಿ ತೀರದಲ್ಲಿ ಈ ವಿನೂತನ ಸ್ಪರ್ಧೆ ನಡೆಯಲಿದೆ.

​ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ, ಕಾಸರಗೋಡು ಹಾಗೂ ಕಾಸರಗೋಡು ಬ್ಲಾಕ್ ಪಂಚಾಯತ್ ಜಂಟಿಯಾಗಿ ಕುಂಬಳೆ ಗ್ರಾ.ಪಂ. ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿವೆ.

ಈ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ ವೃತ್ತಿಪರ ಆಂಗ್ಲರ್‌ಗಳು ಸೇರಿದಂತೆ ನೂರಾರು ಸ್ಪರ್ಧಾಳುಗಳು ಭಾಗವಹಿಸಲಿದ್ದು, ಪ್ರಥಮ ಬಹುಮಾನವಾಗಿ 40 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ.

​ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಬೆಳೆಸುವುದು ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!