ದಲಿತರನ್ನು ಅರಣ್ಯ ಇಲಾಖೆಯ ಮೂಲಕವೂ ದಮನಕ್ಕೆ ಯತ್ನ – ಪುತ್ತೂರು ಡಿ.ಎಚ್.ಎಸ್ ಖಂಡನೆ

ಪುತ್ತೂರು :ದಲಿತರ ಬಗ್ಗೆ ಸಾಮಾಜಿಕ ಅಸಮಾನತೆ ಕೀಳರಿಮೆ ಸರಕಾರಿ ಇಲಾಖೆಯ ಮೂಲಕವು ನಡೆಯುತ್ತಿದೆಯೋ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಸಿಪಿಐಎಂ ಪುತ್ತೂರು ತಾಲೂಕು ಕಾರ್ಯದರ್ಶಿ ವಕೀಲರಾದ ಪಿ.ಕೆ.ಸತೀಶನ್ ಅನುಮಾನ ವ್ಯಕ್ತ ಪಡಿಸಿದ್ದಾರೆ.


ಅವರು ದಲಿತ ಸಮುದಾಯದ ಭೂಮಿ ರಕ್ಷಣೆಗೆ ಆಗ್ರಹಿಸಿ ಸಹಾಯಕ ಕಮೀಶನರ್ ಮತ್ತುಅರಣ್ಯಾಧಿಕಾರಿಗಳೋoದಿ ಗೆ ಮನವಿ ನೀಡಿ
ಮಾತಾಡುತ್ತಿದ್ದರು. ೧೯೮೧-೮೨ ಮತ್ತು ೧೯೮೨-೮೩ ನೇ ಸಾಲುಗಳಲ್ಲಿ ಪುತ್ತೂರು ತಾಲೂಕು ನಿಡ್ಪಳ್ಳಿ ಮತ್ತು ಬಡಗನ್ನೂರು ಗ್ರಾಮದಲ್ಲಿ ದಲಿತ ಸಮುದಾಯದ ಕೆಲವು ಕುಟುಂಬಗಳಿಗೆ ರ‍್ಕಾಸ್ ಮೂಲಕ ಜಮೀನು ನೀಡಿ ಸಾಗುವಳೀ ಚೀಟಿ ನೀಡಲಾಗಿತ್ತು. ಅದರಲ್ಲಿ ಅವರು ಕೃಷಿ ಮಾಡಿ ಜೀವನ
ಸಾಗಿಸುತ್ತಿದ್ದರು.

ಆದರೆ ಭೂಮಿ ಮಂಜೂರಾಗಿ ೪೦ ವರ್ಷಗಳ ತರುವಾಯ ಅರಣ್ಯ ಇಲಾಖೆಯವರು ಅದನ್ನು ತಮ್ಮ ಭೂಮಿ ಎಂದು ಗುಲ್ಲೆಬ್ಬಿಸುತ್ತಾ,ನೋಟೀಸ್ ಜಾರಿ ಮಾಡುತ್ತಾ ದಲಿತ ಸಮುದಾಯದ ಬಡಕುಟುಂಬಗಳನ್ನು ಭಯಬೀತಗೊಳಿಸಿರುವುದು ಅವರ ಬದುಕಿನಲ್ಲಿ ಅಭದ್ರತೆ ಸೃಷ್ಟಿ ಮಾಡಿರುವುದು ಖಂಡನೀಯ ಎಂದರು.


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಸುಮಾರು ೨೫ ಮಂದಿಯ ನಿಯೋಗ ದಲಿತ ಹಕ್ಕು ಸಮಿತಿ (ಡಿ.ಎಚ್.ಎಸ್.) ನೇತೃತ್ವದಲ್ಲಿ ಇಂದು
ಪುತ್ತೂರು ಸಹಾಯಕ ಕಮೀಶನರಿಗೆ ಮನವಿ ನೀಡಿ ಅರಣ್ಯ ಇಲಾಖೆಯ ಕಿರುಕುಳದಿಂದ ತಪ್ಪಿಸಲು ಮತ್ತು ಭೂಮಿ ಪ್ಲಾಟಿಂಗ್ ಮಾಡಿಸಿಕೊಡಲು
ವಿನಂತಿಸಲಾಯಿತು.

ಜೊತೆಗೆ ಸದ್ರಿ ಡಿ.ಎಚ್.ಸ್. ನಿಯೋಗವು ಅರಣ್ಯ ಇಲಾಖೆಗೆ ಬೇಟಿ ನೀಡಿ ಅರಣ್ಯಾಧಿಕಾರಿವರಿಗೂ ಮನವಿಯ ಪ್ರತಿ ನೀಡಿ ಚರ್ಚಿಸಿ ಜಂಟಿ ಸರ್ವೆ ಮಾಡಿಸಿ
ದಲಿತರ ಭೂಮಿಯ ಸುದ್ದಿಗೆ ಅರಣ್ಯ ಇಲಾಖೆ ಬಾರದಂತೆ ವ್ಯವಸ್ಥೆ ಮಾಡಬೇಕೆಂದು ತಿಳಿಸಲಾಯಿತು.ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್, ದಲಿತ ಹಕ್ಕು ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷರಾದ ಚಿದಾನಂದ, ತಾಲೂಕು ಸಮಿತಿಯ ಖಜಾಂಜಿ ಸುಂದರ, ನಿಡ್ಪಳ್ಳಿ ಗ್ರಾಮ ಘಟಕದ ಅಧ್ಯಕ್ಷರಾದ
ಕೃಷ್ಣ ನಿಡ್ಪಳ್ಳಿ ಮೊದಲಾದವರು ಇದ್ದರು. ಇಲಾಖೆಗಳಿಂದ ನ್ಯಾಯದ ಭರವಸೆ ದೊರೆತಿದೆ ಎಂದು ತಿಳಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!