ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗಲೇ ಆಮ್ ಆದ್ಮಿ ಪಕ್ಷ (ಎಎಪಿ) 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 40 ಹಾಲಿ ಶಾಸಕರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗಿದ್ದು, 30 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಧುರಿ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸಲಿದ್ದಾರೆ.

ಬಟಾಲಾ, ಅಮೃತಸರ ದಕ್ಷಿಣ, ಲುಧಿಯಾನ ಪೂರ್ವ, ಜಲಂಧರ್ ಪಶ್ಚಿಮ, ಮೋಗಾ ಮತ್ತು ಪಟಿಯಾಲ ಸೇರಿದಂತೆ ಪಂಜಾಬ್ನ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಮೊದಲು, ಶುಕ್ರವಾರ ದೆಹಲಿಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಪಕ್ಷದ ಉನ್ನತ ಮಟ್ಟದ ಸಭೆ ನಡೆಯಿತು. ಮುಖ್ಯಮಂತ್ರಿ ಭಗವಂತ್ ಮಾನ್, ಪಂಜಾಬ್ ರಾಜ್ಯ ಉಸ್ತುವಾರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಎಎಪಿ ಪ್ರಕಟಿಸಿರುವ 40 ಅಭ್ಯರ್ಥಿಗಳ ಪಟ್ಟಿ:
- ಬಟಾಲಾ – ಅಮನ್ಶೇರ್ ಸಿಂಗ್ (ಶೇರಿ ಕಲ್ಸಿ)
- ಅಜ್ನಾಲಾ – ಕುಲದೀಪ್ ಸಿಂಗ್ ಧಲಿವಾಲ್
- ಅಮೃತಸರ ದಕ್ಷಿಣ – ಡಾ. ಇಂದರ್ಬೀರ್ ಸಿಂಗ್ ನಿಜ್ಜರ್
- ತರನ್ ತಾರನ್ – ಹರ್ಮೀತ್ ಸಿಂಗ್ ಸಂಧು
- ಖೇಮ್ ಕರಣ್ – ಸರ್ವನ್ ಸಿಂಗ್ ಧುನ್
- ನಕೋದರ್ – ಇಂದರ್ಜೀತ್ ಕೌರ್ ಮಾನ್
- ಕರ್ತಾರ್ಪುರ – ಬಲ್ಕಾರ್ ಸಿಂಗ್
- ದಸೂಯಾ – ಕರಮ್ಬೀರ್ ಸಿಂಗ್ ಘುಮಾನ್
- ಉರ್ಮರ್ – ಜಸ್ವೀರ್ ಸಿಂಗ್ ರಾಜಾ ಗಿಲ್
- ಹೋಶಿಯಾರ್ಪುರ – ಬ್ರಹ್ಮ್ ಶಂಕರ್ ಶರ್ಮಾ ಜಿಂಪಾ
- ಚಬ್ಬೇವಾಲ್ – ಇಶಾಂಕ್ ಕುಮಾರ್ ಚಬ್ಬೇವಾಲ್
- ಗಢ್ಶಂಕರ್ – ಜೈ ಕೃಷ್ಣ ಸಿಂಗ್ ರೌರಿ
- ಬಲಾಚೌರ್ – ಸಂತೋಷ್ ಕಟಾರಿಯಾ
- ರೂಪನಗರ – ದಿನೇಶ್ ಛಡ್ಡಾ
- ಎಸ್ಎಎಸ್ ನಗರ – ಕುಲವಂತ್ ಸಿಂಗ್
- ಫತೇಗಢ್ ಸಾಹಿಬ್ – ಲಖ್ಬೀರ್ ಸಿಂಗ್ ರಾಯ್
- ಅಮ್ಲೋಹ್ – ಗುರ್ಇಂದರ್ ಸಿಂಗ್ ಗ್ಯಾರಿ ವಾರಿಂಗ್
- ಸಮ್ರಾಲಾ – ಜಗ್ತಾರ್ ಸಿಂಗ್ ದಿಯಾಲ್ಪುರ
- ಲುಧಿಯಾನ ಪೂರ್ವ – ದಲ್ಜೀತ್ ಸಿಂಗ್ ಗ್ರೇವಾಲ್ ಭೋಲಾ
- ಆತಮ್ ನಗರ – ಕುಲವಂತ್ ಸಿಂಗ್ ಸಿಧು
- ಲುಧಿಯಾನ ಕೇಂದ್ರ – ಅಶೋಕ್ ಪರಾಶರ್ ಪಪ್ಪಿ
- ಲುಧಿಯಾನ ಪಶ್ಚಿಮ – ಸಂಜೀವ್ ಅರೋರಾ
- ಲುಧಿಯಾನ ಉತ್ತರ – ಚೌಧರಿ ಮದನ್ ಲಾಲ್ ಬಗ್ಗಾ
- ಪಾಯಲ್ – ಮನ್ವಿಂದರ್ ಸಿಂಗ್ ಗಿಯಾಸ್ಪುರ
- ನಿಹಾಲ್ ಸಿಂಗ್ ವಾಲಾ – ಮಂಜೀತ್ ಸಿಂಗ್ ಬಿಲಾಸ್ಪುರ
- ಭಗಾ ಪುರಾಣ – ಅಮೃತ್ಪಾಲ್ ಸಿಂಗ್ ಸುಖಾನಂದ್
- ಮೋಗಾ – ಡಾ. ಅಮನ್ದೀಪ್ ಕೌರ್ ಅರೋರಾ
- ಧರಮ್ಕೋಟ್ – ದೇವಿಂದರ್ ಜೀತ್ ಸಿಂಗ್ ಲಡ್ಡಿ ಧೋಸ್
- ಜಲಾಲಾಬಾದ್ – ಜಗದೀಪ್ ಕಂಬೋಜ್ ಗೋಲ್ಡಿ
- ಫಾಜಿಲ್ಕಾ – ನರೀಂದರ್ಪಾಲ್ ಸಿಂಗ್ ಸಾವ್ನಾ
- ಮುಕ್ತ್ಸರ್ – ಜಗದೀಪ್ ಸಿಂಗ್ ಕಾಕಾ ಬ್ರಾರ್
- ಕೋಟ್ಕಪುರ – ಕುಲ್ತಾರ್ ಸಿಂಗ್ ಸಂಧವಾನ್
- ಜೈತು – ಅಮೋಲಕ್ ಸಿಂಗ್
- ತಲ್ವಂಡಿ ಸಾಬೋ – ಬಲ್ಜಿಂದರ್ ಕೌರ್
- ಸರ್ದೂಲ್ಗಢ್ – ಗುರ್ಪ್ರೀತ್ ಸಿಂಗ್ ಬನವಾಲಿ
- ಬದೌರ್ – ಲಾಭ್ ಸಿಂಗ್ ಉಗೋಕೆ
- ಮೆಹಲ್ ಕಲನ್ – ಕುಲವಂತ್ ಸಿಂಗ್ ಪಂಡೋರಿ
- ಅಮರ್ಗಢ್ – ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ
- ಧುರಿ – ಭಗವಂತ್ ಮಾನ್
- ಪಟಿಯಾಲ – ಅಜಿತ್ಪಾಲ್ ಸಿಂಗ್ ಕೊಹ್ಲಿ

ಇನ್ನೊಂದೆಡೆ, ಪಂಜಾಬ್ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಕಾಂಗ್ರೆಸ್ ಹೈಕಮಾಂಡ್ ಕೂಡ ಪರಿಶೀಲನೆ ನಡೆಸಿದೆ. ದೆಹಲಿಯ ಇಂದಿರಾ ಭವನದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.

