
ಕಾಸರಗೋಡು: ಖಾಸಗಿ ಆಸ್ಪತ್ರೆಯ ದಾದಿಯೊಬ್ಬರು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಕಾಞಂಗಾಡು ಸಮೀಪದ ಮಾವುಂಗಾಲ್ನಲ್ಲಿ ಘಟನೆ ನಡೆದಿದ್ದು ಮಾವುಂಗಾಲ್ ಮೂಲಕಂಡಂ ಉನ್ನತಿ (ಲಕ್ಷಂವೀಡ್) ಕಾಲನಿಯ ಸುಧೀಶ್ ಎಂಬವರ ಪತ್ನಿ ಸುಧೀನಾ (31) ಸಾವನ್ನಪ್ಪಿದ ದುರ್ದೈವಿ.

ಬಾನುವಾರ ಬೆಳಿಗ್ಗೆ ಇವರು ತಮ್ಮ ಕೊಠಡಿಯ ಕಿಟಿಕಿ ಸರಳಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತ ಸುಧೀನಾ ಕಾಞಂಗಾಡಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.


