ಮಾವಂಗಾಲ್‌ನಲ್ಲಿ ಖಾಸಗಿ ಆಸ್ಪತ್ರೆಯ ನರ್ಸ್ ಅನುಮಾನಾಸ್ಪದ ಸಾವು

​

ಕಾಸರಗೋಡು: ಖಾಸಗಿ ಆಸ್ಪತ್ರೆಯ ದಾದಿಯೊಬ್ಬರು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಕಾಞಂಗಾಡು ಸಮೀಪದ ಮಾವುಂಗಾಲ್‌ನಲ್ಲಿ ಘಟನೆ ನಡೆದಿದ್ದು ಮಾವುಂಗಾಲ್ ಮೂಲಕಂಡಂ ಉನ್ನತಿ (ಲಕ್ಷಂವೀಡ್) ಕಾಲನಿಯ ಸುಧೀಶ್ ಎಂಬವರ ಪತ್ನಿ ಸುಧೀನಾ (31) ಸಾವನ್ನಪ್ಪಿದ ದುರ್ದೈವಿ.

​ ಬಾನುವಾರ ಬೆಳಿಗ್ಗೆ ಇವರು ತಮ್ಮ ಕೊಠಡಿಯ ಕಿಟಿಕಿ ಸರಳಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತ ಸುಧೀನಾ ಕಾಞಂಗಾಡಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.

​ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!