ಪುತ್ತೂರು :AIKMCC ಪುತ್ತೂರು ತಾಲೂಕು,ಶಿಹಾಬ್,ತಂಙಳ್ ಸೆಂಟರ್ ಫಾರ್ ಹ್ಯೂಮೇನಿಟಿ ಇದರ ವತಿಯಿಂದ ಕಾರುಣ್ಯ ಸೇವಾ ಮುಖಾಂತರ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಜಾತಿ ಮತ ಭೇದವಿಲ್ಲದೆ ಸ್ಪಂದಿಸುತ್ತಿದ್ದು, ಅನಾರೋಗ್ಯ ಪೀಡಿತರಿಗೆ. ನಾನಾ ರೀತಿಯ ಸಹಾಯ ಮಾಡುವುದರೊಂದಿಗೆ ನಡೆಯಲಾಗದವರಿಗೆ ವಾಕರ್, ಶ್ವಾಸಕೋಶ ತೊಂದರೆ ಇರುವವರಿಗೆ ಮನೆಗಳಿಗೆ ಭೇಟಿ ನೀಡಿ ಆಕ್ಸಿಜನ್ ಸೌಲಭ್ಯ, ವೈದ್ಯಕೀಯ ಉಪಕರಣಗಳನ್ನು ನೀಡುತ್ತಿದ್ದು ದಿನಾಂಕ, 1.11.206ರಂದು ನಂದಾವರ ಸಹಚಾರಿ ಸೆಂಟರಿಗೆ ನಡೆದಾಡಲು ಕಷ್ಟವಾಗುವ ಅನಾರೋಗ್ಯವಂತರಿಗೆ
ನೀಡಲು ವಾಕರ್ ನ್ನು ಕೊಡುಗೆಯಾಗಿ ನೀಡಲಾಯಿತು.

ಹಸ್ತಾಂತರ ಸಮಯದಲ್ಲಿ ಪುತ್ತೂರು ತಾಲೂಕು ಅಧ್ಯಕ್ಷರಾದ ಅಬುಬಕ್ಕರ್ ಮುಲಾರ್ ಸಂಘಟನಾ ಕಾರ್ಯದರ್ಶಿ ಹನೀಫ್ ನಂದಿನಿ ದರ್ಬೆ,ಸದಸ್ಯರಾದ ಎಂ.ಬಿ.ಇಸ್ಮಾಯಿಲ್ ಬಲ್ನಾಡು ಉಪಸ್ಥಿತರಿದ್ದರು.

