ಕೂಡ್ಲುವಿನಲ್ಲಿ ಸೇವಾ ಸಂಕಲ್ಪ ಅಭಿಯಾನ; ಕ್ರೀಡಾ ಸಾಧಕರಿಗೆ ಗೌರವ

ಮಧೂರ್ ಪಂಚಾಯತ್ 17ನೇ ವಾರ್ಡ್ ಬಿ ಜೆ ಪಿ ಸಮಿತಿಯ ವತಿಯಿಂದ “ಸೇವಾ ಸಂಕಲ್ಪ ಅಭಿಯಾನ “ಕಾರ್ಯಕ್ರಮದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಇಂದು ಕೂಡ್ಲು ಮಾರಾರ್ಜಿ ಭವನದಲ್ಲಿ ಜರಗಿತು. ಕಾರ್ಯಕ್ರಮ ವನ್ನು ಬಿ ಜೆ. ಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಲಾಲ್ ಮೆಲೋತ್ ಉದ್ಘಾಟಿಸಿದರು. ವಾರ್ಡ್ ಸದಸ್ಯರು ಹಾಗೂ ಮಧೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭಾನು ಪ್ರಕಾಶ್ ಅಧ್ಯಕ್ಷತೆ ವಹಿಸಿದರು.

ಜಿಲ್ಲಾ ಸೆಲ್ ಕೊಡಿನೆಟರ್ ಸುಕುಮಾರ್ ಕುದ್ರೆಪ್ಪಾಡಿ, ಮಧೂರ್ ಪಂಚಾಯತ್ ವೆಸ್ಟ್ ಬಿ ಜೆ ಪಿ ಅಧ್ಯಕ್ಷ ಶ್ರೀಧರ್ ಕೂಡ್ಲು, ಮಧೂರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗೋಪಾಲ ಕೃಷ್ಣ ಕೂಡ್ಲು, ಹಿರಿಯ ನೇತಾರ ಮಹಾಬಲ ರೈ ಕೂಡ್ಲು ಶುಭಾಶoಶನೆ ಗೈದರು. ಸುರೇಶ್ ಕಾಳ್ಯoಗಾಡ್ ಸ್ವಾಗತಿಸಿ ಕಮಲಾಕ್ಷ ಪಚ್ಚೆಕ್ಕಾಡ್ ವಂದಿಸಿದರು. ಅಶೋಕ್ ಮನ್ನಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕೇರಳ ಯೂನಿವರ್ಸಿಟಿ ಒಫ್ ಹೆಲ್ತ್ ಸೈನ್ಸ್ 2026 ನಡೆದ ಶಿಶು ವೈದಕಿಯ ಹಾಗೂ ಮಕ್ಕಳ ದಂತ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಗಳಿಸಿದ ಚೈತನ್ಯ ಪ್ರಕಾಶ್ ರನ್ನು ಮತ್ತು ಕೇರಳ ಸ್ಕೂಲ್ ಸ್ಪೋರ್ಟ್ ಅಂಡ್ ಗೇಮ್ಸ್ ಸ್ಪರ್ಧೆಗಳಲ್ಲಿ ಪದಕ ಗಳಿಸಿದ ಧನ್ವಿತ್ ಪಿ ಕೆ ಇವರನ್ನು ಸನ್ಮಾನಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!