ರೇಷನ್ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕಾಸರಗೋಡಿನಲ್ಲಿ ಧರಣಿ

ಕಾಸರಗೋಡು : ರೇಷನ್ ವಲಯದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿಯೇಷನ್ ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಯಿತು.

ಉದುಮ ಶಾಸಕ ಕೆ. ನೀಲಕಂಠನ್ ಪ್ರತಿಭಟನೆಯನ್ನು ಉದ್ಘಾಟಿಸಿದರು.

​ಡಿಬಿಟಿ ಪದ್ಧತಿ ಹಾಗೂ ಎಎವೈ ಕಾರ್ಡ್‌ದಾರರ ಧಾನ್ಯ ಕಡಿತದ ಯತ್ನವನ್ನು ಕೈಬಿಡಬೇಕು, ಒಬ್ಬ ವ್ಯಕ್ತಿಗೆ ತಿಂಗಳಿಗೆ 13.5 ಕಿಲೋ ಆಹಾರ ಧಾನ್ಯ ನೀಡಬೇಕು, ಸೀಮೆಎಣ್ಣೆ-ಸಕ್ಕರೆ ಕಡಿತ ಹಿಂಪಡೆಯಬೇಕು ಮತ್ತು ಎಲ್ಲಾ ಕಾರ್ಡ್‌ದಾರರಿಗೆ 10 ಕಿಲೋ ಧಾನ್ಯ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

​ತಾಲೂಕು ಅಧ್ಯಕ್ಷ ಬಾಲಕೃಷ್ಣ ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸತೀಶನ್ ಇಡವೇಲಿ ಮುಖ್ಯ ಭಾಷಣ ಮಾಡಿದರು. ಪ್ರಮುಖ ನಾಯಕರಾದ ಲೋಹಿತಾಕ್ಷನ್, ವಿಜಯನ್ ನಾಯ‌ರ್, ವಸಂತ ಶೆಣೈ, ಚಂದ್ರನ್ ಚಡವಡ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!