ಕುಂಬಳೆ ಪಂಚಾಯತ್ ಕ್ಯಾಂಟೀನ್ ತ್ಯಾಜ್ಯ ನೀರಿನಿಂದ ಸ್ಥಳೀಯರಿಗೆ ಸಂಕಷ್ಟ

ಕುಂಬಳೆ : ಕುಂಬಳೆ ಪಂಚಾಯತ್ ಕಚೇರಿ ಕಾಂಪ್ಲೆಕ್ಸ್‌ನ ಕ್ಯಾಂಟೀನ್ ತ್ಯಾಜ್ಯ ನೀರನ್ನು ತೆರೆದ ಜಾಗಕ್ಕೆ ಹರಿಬಿಡುತ್ತಿರುವುದರಿಂದ ಸಮೀಪದ ಮನೆ ಅಂಗಳಗಳು ಹಾಗೂ ಕಾಲುದಾರಿಗಳಲ್ಲಿ ಗಲೀಜು ನೀರು ತುಂಬಿಕೊಂಡು ನಾರುತ್ತಿದ್ದು, ಸ್ಥಳೀಯರ ಜೀವನ ನರಕಸಮಾನವಾಗಿದೆ.

​ಹೋಟೆಲ್ ತ್ಯಾಜ್ಯದಿಂದ ಪೈಪ್ ಮುಚ್ಚಿಹೋದಾಗ, ಅದನ್ನು ಸರಿಪಡಿಸುವ ಬದಲು ತುಂಡರಿಸಿ ತೆರೆದ ಜಾಗಕ್ಕೆ ಹರಿದುಬರುವಂತೆ ಮಾಡಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ.

ಕಳೆದ ಎರಡು ವಾರಗಳಿಂದ ಈ ದುರ್ನಾತ ಹೆಚ್ಚಾಗಿದ್ದರೂ ಪಂಚಾಯತ್ ಅಧಿಕಾರಿಗಳು ಹಾಗೂ ಹೋಟೆಲ್ ಮಾಲಕರು ಯಾವುದೇ ಕ್ರಮ ಕೈಗೊಂಡಿಲ್ಲ.
​ಪಂಚಾಯತ್ ಮತ್ತು ಆರೋಗ್ಯ ವಿಭಾಗಕ್ಕೆ ಲಿಖಿತ ದೂರು ನೀಡಿದ್ದರೂ, ಅಧಿಕಾರಿಗಳು ದೂರನ್ನು ಕಡತದಲ್ಲೇ ಬಾಂಧವಿಟ್ಟು ನಿರ್ಲಕ್ಷಿಸಿದ್ದಾರೆನ್ನಲಾಗಿದೆ.

ಸ್ವತಃ ಪಂಚಾಯತ್ ಕಚೇರಿಯಲ್ಲೇ ಈ ಸ್ಥಿತಿ ಇದ್ದರೆ ನಾಡಿನಲ್ಲಿ ಶುಚಿತ್ವ ಎಲ್ಲಿದೆ? ಎಂದು ಸಂತ್ರಸ್ತ ನಿತ್ಯಾನಂದ ಪೈ ಖಾರವಾಗಿ ಪ್ರಶ್ನಿಸಿದ್ದಾರೆ.

ಕೂಡಲೇ ಅಧಿಕಾರಿಗಳು ಎಚ್ಚೆತ್ತು ತ್ಯಾಜ್ಯ ನೀರು ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!