ಪುತ್ತೂರಿನಲ್ಲಿ ಮೈ ಭಾರತ್ ವತಿಯಿಂದ ಯುವ ಸಂವಾದ: ಮತದಾನದ ಮಹತ್ವದ ಬಗ್ಗೆ ಯುವಜನರಿಗೆ ಜಾಗೃತಿ

ಪುತ್ತೂರು: ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ MY Bharat – ದಕ್ಷಿಣ ಕನ್ನಡ ಹಾಗೂ ವಿವೇಕಾನಂದ ಕಾಲೇಜು ಪುತ್ತೂರು, ರಾಷ್ಟ್ರೀಯ ಸೇವಾ ಯೋಜನೆ (NSS) ಇವರ ಸಂಯುಕ್ತ ಆಶ್ರಯದಲ್ಲಿ ‘ವಿಕಸಿತ ಭಾರತ ಯುವ ಸಂವಾದ X Know Your Vote’ ಕಾರ್ಯಕ್ರಮವು ಬುಧವಾರ ವಿವೇಕಾನಂದ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಉದ್ಘಾಟಿಸಿ ಮಾತನಾಡಿದರು. “ಪ್ರಜಾಪ್ರಭುತ್ವದ ಶಕ್ತಿ ಯುವಜನರ ಕೈಯಲ್ಲಿದೆ. ಪ್ರತಿಯೊಬ್ಬ ಯುವಕನೂ ತನ್ನ ಮತದ ಹಕ್ಕನ್ನು ಚಲಾಯಿಸಬೇಕು. ಮತದಾನ ಎಂದರೆ ಕೇವಲ ಹಕ್ಕಲ್ಲ, ಅದು ನಮ್ಮ ಕರ್ತವ್ಯ” ಎಂದು ಅವರು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮಾತ್ರವಲ್ಲ, ದೇಶದ ಭವಿಷ್ಯ ನಿರ್ಮಾಣದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ದಕ್ಷಿಣ ಕನ್ನಡದ ಯೂತ್ ಐಕಾನ್ ಶ್ರೀ ಅಭಿಜಯ್ ಎನ್.ಎಸ್ ಅವರು ವಿಶೇಷ ಭಾಷಣ ಮಾಡಿದರು. ಪ್ರಜಾಪ್ರಭುತ್ವ ಎಂದರೆ ಕೇವಲ ಮತ ಹಾಕುವುದಲ್ಲ,
ಪ್ರಾಮಾಣಿಕತೆಯಿಂದ ಮತ ಹಾಕುವುದು. ಒಂದು ಮತ, ಒಂದು ಭವಿಷ್ಯ. ಪ್ರತಿಯೊಂದು ಮತವೂ ಪವಿತ್ರವಾದದ್ದು. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ MY Bharat ದಕ್ಷಿಣ ಕನ್ನಡದ ಉಪ ನಿರ್ದೇಶಕರಾದ ಶ್ರೀ ಉಲ್ಲಾಸ್ ಕೆ.ಟಿ.ಕೆ, NSS ಅಧಿಕಾರಿಗಳಾದ ಡಾ. ಅರುಣ್ ಪ್ರಕಾಶ್, ಶ್ರೀಮತಿ ವಿದ್ಯಾ ಕೆ.ಎನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತದಾರರ ನೋಂದಣಿ, ಹೆಸರು ತಿದ್ದುಪಡಿ, ದಾಖಲೆಗಳು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!