ಕುಪ್ಪೆಟ್ಟಿ–ಉಪ್ಪಿನಂಗಡಿ ರಸ್ತೆ ದುರಾವಸ್ಥೆ : ನಾಗರಿಕ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಬರುವ ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ದುರಾವಸ್ಥೆಯ ವಿರುದ್ಧ ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶವು ಕಲ್ಲೇರಿ ಜಂಕ್ಷನ್ ಬಳಿ ನಡೆಯಿತು.

ಸಮಿತಿ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಿಗೌಡ ಪುಷ್ಪಗಿರಿ ಮಾತನಾಡಿ “ನಾವು ನಮ್ಮ ಬೇಡಿಕೆಗಳನ್ನು ಕೇಳುತ್ತಿದ್ದೇವೆ. 60 ವರ್ಷದ ಹಿಂದೆ ರಸ್ತೆ ನಿರ್ವಹಣೆಗೆ ಗ್ಯಾಂಗ್ ವರ್ಕ್ಸ್ ರನ್ನು ನೇಮಿಸಲಾಗಿತ್ತು. ಇದನ್ನು ಮತ್ತೆ ಪ್ರಾರಂಭಿಸಬೇಕು” ಎಂದರು.

ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಮಹ್ಮದ್ ಆಲಿ ತುರ್ಕಳಿಕೆ ಮಾತನಾಡಿ “ದೈನಂದಿನ ಓಡಾಟಗಾರಿಗೆ, ವಿದ್ಯಾರ್ಥಿಗಳಿಗೆ, ಚಾಲಕರಿಗೆ, ಕಾರ್ಮಿಕರಿಗೆ, ರೋಗಿಗಳಿಗೆ ತೊಂದರೆ ತೀವ್ರವಾದರು,  ರಸ್ತೆ ಅಭಿವೃದ್ಧಿ ಕಡೆಗಣಿಸಲಾಗುತ್ತಿದೆ. ನವೆಂಬರ್ 16 ರಕ್ಕಿಂತ ಮೊದಲು ಕಾಮಗಾರಿ ಪ್ರಾರಂಭಗೊಳ್ಳಬೇಕು ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಕೆಯ ಕರೆಗಂಟೆ ನೀಡಿದರು.

ಭರವಸೆ ಬೇಡ ರಸ್ತೆ ಬೇಕು ನ್ಯಾಯಬೇಕು, ಸರಕಾರದ ವಿರುದ್ಧ ಪ್ರತಿಭಟನಕಾರರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಾಹನ ಸವಾರರಿಗೆ ಕೆಲ ಕಾಲ ತೊಂದರೆ ಉಂಟಾಯಿತು. ಉಪ್ಪಿನಂಗಡಿ ಪೊಲೀಸ್ ಠಾಣೆ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!