ಮಂಜೇಶ್ವರ: ರಕ್ತದಾನವು ಶ್ರೇಷ್ಠ ದಾನ ವಾಗಿದ್ದು, ನಮ್ಮ ಎಲ್ಲಾ ಸಂಪತ್ತಿಗಿಂತಲೂ ನಮ್ಮ ಸುರಕ್ಷಿತ ಆರೋಗ್ಯದ ಸಂಪತ್ತು ಮುಖ್ಯ ವಾಗಿದೆ. ಇಂದಿನ ಜೀವನ ಶೈಲಿ ಮತ್ತು ಕಲಬೆರಕೆಯ ಆಹಾರ ಸೇವನೆಯೇ ಅನಾರೋಗ್ಯ ಕ್ಕೆ ಕಾರಣವಾಗಿದೆ ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತನ್ ಹೇಳಿದ್ದಾರೆ.ಅವರು ಅಗ್ನಿಬ್ರಿಗೇಡ್ ಮಜೀರ್ ಪಳ್ಳ ಮತ್ತು ಕೆ. ಎಂ. ಸಿ ರಕ್ತನಿಧಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಕೋಳ್ಯೂರು ಆಡಿಟೋರಿಯಂ ನಲ್ಲಿ ಉಧ್ಘಾಟಿಸಿ ಮಾತನಾಡಿದರು.
ಅಗ್ನಿಬ್ರಿಗೇಡ್ ಮಜೀರ್ ಪಳ್ಳ ರವರ ಈ ಕಾರ್ಯವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.ಮುಖ್ಯ ಅತಿಥಿಯನ್ನು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅಗ್ನಿ ಬ್ರಿಗೇಡ್ ನ ಲೋಗೋ ವನ್ನು ಲೋಕಾರ್ಪಣೆಗೊಳಿಸಿದರು .ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಅಗ್ನಿ ಬ್ರಿಗೇಡ್ ನ ಎಲ್ಲಾ ಕಾರ್ಯಕ್ರಮಗಳು ನೆರವು ನೀಡಲಾಗುವುದೆಂದು ಹೇಳಿದರು.
ಮಿಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್,ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ ಎಲ್,ಮಿಂಜ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಕುಳೂರು,ಸದಸ್ಯರಾದ ನಾರಾಯಣ ತುಂಗಾ ,ಅಬ್ದುಲ್ ರಝಕ್,ಅಗ್ನಿ ಬ್ರಿಗೇಡ್ ನ ಗೌರವಾಧ್ಯಕ್ಷ ಸೋಮಪ್ಪ ಮೊದಲಾದವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭಾಂಶನೇ ಗೈದರು.
ನಟ ರಾದ ಅರವಿಂದ ಬೋಳಾರ್ ಮತ್ತು ರೂಪ ವರ್ಕಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಈ ಸಂದರ್ಭದಲ್ಲಿ ನಿವೃತ ಶಿಕ್ಷಕರಾದ ಸುಬ್ರಮಣ್ಯ ಭಟ್ ಹಾಗೂ ಅಂಗನವಾಡಿ ಸಹ ಶಿಕ್ಷಕಿ ಶ್ರೀಮತಿ ಲಲಿತ ರವರನ್ನು ಅಭಿನಂದಿಸಲಾಯಿತು .
ಅಗ್ನಿ ಬ್ರಿಗೇಡ್ ನ ಸದಸ್ಯರಾದ ಮನೋಜ್ ದೈಗೋಳಿ ಸ್ವಾಗತಿಸಿ ಮನ್ವಿತ್ ಕಳಿಯೂರು ವಂದಿಸಿದರು.ಕಿರಣ್ ಕುಮಾರ್ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.ವಿಖ್ಯಾತ್ ಸನ್ಮಾನಿತರನ್ನು ಪರಿಚಯಿಸಿದರು.