ಲಿಫ್ಟ್ ಕೊಡುವ ನೆಪದಲ್ಲಿ ಗೃಹಿಣಿಯ ಚಿನ್ನದ ಸರ ಕಳವು; 29 ವರ್ಷದ ಯುವಕ ಅರೆಸ್ಟ್!

ಕಾಸರಗೋಡು: ಸ್ಕೂಟರ್‌ನಲ್ಲಿ ಲಿಫ್ಟ್ ನೀಡುವುದಾಗಿ ನಂಬಿಸಿ ಪಯ್ಯನ್ನೂರಿನಲ್ಲಿ ಗೃಹಿಣಿಯೊಬ್ಬರ ಚಿನ್ನದ ಸರವನ್ನು ಕಳವು ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಪೂವ್ಯಂ ನಿವಾಸಿ ಮರ್ಷಾದ್ (29) ಬಂಧಿತ ಆರೋಪಿಯಾಗಿದ್ದು, ಈತ ಮಾತಾಮಂಗಲದ ತಾಟ್ರೇರಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

​ಕಳೆದ ಶನಿವಾರ ಬೆಳಿಗ್ಗೆ ಎಡಕ್ಕೋಂ ಏರ್ರಂ ಮಾರ್ಗವಾಗಿ ಮಾತಾಮಂಗಲಕ್ಕೆ ಬರುವಾಗ ಕಣ್ಣಾರಂ ವಯಲಿಯ ಎಡವನ್ ಶಾಂತಾ ಎಂಬುವವರನ್ನು ಆರೋಪಿ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೋಗಿ ವಂಚಿಸಿ ಸರ ಕಳವು ಮಾಡಿದ್ದನು.

ಪರಿಯಾರಂ ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ವೈಜ್ಞಾನಿಕ ತನಿಖೆಯ ಮೂಲಕ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!