ಮಲಗಿದ್ದ ಪತಿಯನ್ನೇ ಕುತ್ತಿಗೆ ಹಿಸುಕಿ ಕೊಲೆ; ಪತ್ನಿ ಸೇರಿ ಇಬ್ಬರಿಗೆ ಜೀವಾವಧಿ ಶಿಕ್ಷೆ

ಕಾಸರಗೋಡು: ಕೋವಿಡ್ ಕಾಲದಲ್ಲಿ ಮಲಗಿದ್ದ ವೃದ್ಧನಾದ ಪತಿಯನ್ನು ಕುತ್ತಿಗೆ ಹಿಸುಕಿ ಕೊಲೆಗೈದ ಪ್ರಕರಣದಲ್ಲಿ ಮೃತ ವೃದ್ಧನ ಪತ್ನಿ ಹಾಗೂ ಆಕೆಯ ಸಹೋದರಿಯ ಮಗನಿಗೆ ಕಾಸರಗೋಡು ಜಿಲ್ಲಾ ಅಡಿಷನಲ್ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

​ಚೆರ್ಕಳ ಪೋಲೀಸ್ ಸ್ಟೇಷನ್ ವ್ಯಾಪ್ತಿಯ ಮಡಿವಯಲಿನ ಪತ್ತಾನತ್ ಕುಞಂಬು (67) ಕೊಲೆಯಾದವರು. ಇವರ ಪತ್ನಿ ಚೆಂಬಿರಿಚ್ಚಿ ಜಾನಕಿ (55) ಮತ್ತು ಜಾನಕಿಯ ಸಹೋದರಿಯ ಪುತ್ರ ರಾಜೇಶ್ (40) ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.

ಪ್ರಕರಣದ ಮೂರನೇ ಆರೋಪಿ ಅನಿಲ್ ಎಂಬಾತ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

​2021ರ ಜುಲೈ 22ರಂದು ರಾತ್ರಿ ಈ ಕೃತ್ಯ ನಡೆದಿತ್ತು. ಅಂದಿನ ಚೆರ್ಕಳ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ನಾರಾಯಣಣನ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದೋಷಿಗಳಿಗೆ ನ್ಯಾಯಾಲಯವು ಜೀವಾವಧಿ ಜೈಲು ಶಿಕ್ಷೆಯೊಂದಿಗೆ ದಂಡದ ಆದೇಶ ಹೊರಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!