ಜೋಡುಕಲ್ಲು ತಪೋವನಕ್ಕೆ ಕೇರಳ ಬಿಜೆಪಿ ಶಾಸಕ ಬಿ.ಬಿ. ಗೋಪಾಕುಮಾರ್ ಭೇಟಿ

ಪೈವಳಿಕೆ: ಜೋಡುಕಲ್ಲು ತಪೋವನಕ್ಕೆ ಭೇಟಿ ನೀಡಿದ ಕೇರಳ ಬಿಜೆಪಿ ಶಾಸಕ ಬಿ.ಬಿ. ಗೋಪಾಕುಮಾರ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಮುಸ್ಲಿಂ ಲೀಗ್ ಮುಖ್ಯಮಂತ್ರಿಯನ್ನು ನಿಯಂತ್ರಿಸುತ್ತಿದ್ದು, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಧಾರ್ಮಿಕ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಜೋಡುಕಲ್ಲಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿವೆ. ಕಳೆದ 40 ವರ್ಷಗಳಿಂದ ಗಣೇಶ ಮಂದಿರ ಮತ್ತು ಶಿಶು ಮಂದಿರ ಇರುವ ಸ್ಥಳವನ್ನು ಕಾನೂನಿನ ಹೆಸರಿನಲ್ಲಿ ಅಧಿಕಾರ ಬಲ ಬಳಸಿ ಹಿಂದೂಗಳನ್ನು ನಿಯಂತ್ರಿಸಲು ಮುಂದಾಗಿರುವುದನ್ನು ಸುಮ್ಮನೆ ನೋಡಿಕೊಂಡು ಕೂರಲು ಸಾಧ್ಯವಿಲ್ಲ. ಇಲ್ಲಿನ ಸಮಸ್ಯೆಗಳನ್ನು ಕೇರಳ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕ ಗೋಪಾಕುಮಾರ್ ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್, ಜಿಲ್ಲಾ ಕಾರ್ಯದರ್ಶಿ ಪಿ ಆರ್ ಸುನಿಲ್,ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ವಿಕ್ರಂ ಪೈ, ವಿಜಯ್ ಕುಮಾರ್ ರೈ, ಏ ಕೆ ಕಾಯರ್, ಸದಾಶಿವ ಚೇರಲ್ ಮೊದಲದವರು ಉಪಸ್ಥಿತರಿದ್ದರು.
ಶಿಜು ಸ್ವಾಗತಿಸಿ ಲೋಕೇಶ್ ನೋಂಡ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!