ಮತಗಳ ಲೂಟಿ ವಿಷಯದಲ್ಲಿ ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಕೋರಿ ಲೋಕಸಭೆಯ ವಿರೋಧ ಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿ ಅವರು ಎತ್ತಿದ ಐದು ಪ್ರಶ್ನೆಗಳಿಗೆ ಉತ್ತರಗಳನ್ನು ಕೋರಿ ಪುತ್ತಿಗೆ ಮಂಡಲಂ ಯುವ ಕಾಂಗ್ರೆಸ್ ಚುನಾವಣಾ ಆಯುಕ್ತರಿಗೆ ಪುತ್ತಿಗೆ ಅಂಚೆ ಕಛೇರಿಯಿಂದ ಪತ್ರ ಕಳುಹಿಸಿ ಪ್ರತಿಭಟನೆ ಮಾಡಿದರು .
ಯುವ ಕಾಂಗ್ರೆಸ್ ಪುತ್ತಿಗೆ ಮಂಡಲ ಅಧ್ಯಕ್ಷ ದಯಾನಂದ ಬಾಡೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಕೇಶವ SR ಉದ್ಘಾಟಿಸಿದರು.ನೇತಾರರಾದ ಮಂಜೇಶ್ವರ ಮಂಡಲ ಅಧ್ಯಕ್ಷ ಜುನೈದ್ ಉರ್ಮಿ, ಶುಕುರ್ ಕಣಾಜೆ, ಕಾಮರುದ್ಧಿನ್, ರಾಝಿ ಕಯ್ಯಂಕೂಡಲ್,ಕುಂಜ್ಯ್ ಅಹಮದ್ ಕಯ್ಯಂಕೂಡಲ್ ಅಶ್ರಫ್ ಕಲನಗರ್,ಸಿರಾಜ್ ಕಣ್ಣೂರು ಮೊದಲಾದವರು ಮಾತಾಡಿದರು.