ಹವಾಲಾ, ಚಿನ್ನ ಕಳ್ಳಸಾಗಣೆ ಮತ್ತು ಫೆಮಾ ಕಾಯ್ದೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಅಧಿಕಾರಿಗಳಿಂದ ರಾಜ್ಯದ 10 ಕಡೆ ಏಕಕಾಲಕ್ಕೆ ದಾಳಿ

ಕಾಸರಗೋಡು : ಹವಾಲಾ, ಚಿನ್ನ ಕಳ್ಳಸಾಗಾಟ ಮತ್ತು ಫೆಮಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾಸರಗೋಡಿನ ಎರಡು ಸ್ಥಳಗಳೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 10 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಕಾಸರಗೋಡಿನ ತಳಂಗರೆ ಬಾಂಗೋಡಿನ ಅಹಮ್ಮದ್ ಸಮೀರ್ ಚೆಂಗಳ ಅಬೂಬಕ್ಕರ್ ಅವರ ‘ಝೈನಬಾ ಮಂಜಿಲ್’ ಹಾಗೂ ಚೆಂಬರಿಕ ಚಂದ್ರಗಿರಿಯ ಶಾಫಿ ಚೆಂಬರಿಕ ಅವರ ‘ಚಾಪಾ ಹೌಸ್’ ಸೇರಿದಂತೆ ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಮತ್ತು ಪಾಲಕ್ಕಾಡ್‌ನ ಹಲವರ ಮನೆಗಳಲ್ಲಿ ತಪಾಸಣೆ ನಡೆದಿದೆ.

ದಾಳಿ ವೇಳೆ ಅಕ್ರಮ ಹಣಕಾಸು ವ್ಯವಹಾರ, ಚಿನ್ನ ಸಾಗಾಟದ ದಾಖಲೆಗಳು ಮತ್ತು ಡಿಜಿಟಲ್ ಮಾಹಿತಿಗಳನ್ನು ಇ.ಡಿ ವಶಪಡಿಸಿಕೊಂಡಿದೆ. ತಪಾಸಣೆಗೊಳಗಾದ ಮನೆಯವರಲ್ಲಿ ಹಲವರು ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರಗಳನ್ನು ಇ.ಡಿ ಇನ್ನೂ ಬಹಿರಂಗಪಡಿಸಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!