ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನಿಯರ್ ಲಿಟ್ಲ್ ಕೈಟ್ಸ್ ಘಟಕದ ಉದ್ಘಾಟನೆ

ಕಳಿಯೂರು: ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನಿಯರ್ ಲಿಟ್ಲ್ ಕೈಟ್ಸ್ ಘಟಕದ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 17ರಂದು ಮಂಗಳವಾರ ನಡೆಯಿತು.

ಮೀಂಜ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯೆ ಶ್ರೀಮತಿ ಸೌಮ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಜ್ಞಾನ, ಸೃಜನಶೀಲತೆ ಹಾಗೂ ಡಿಜಿಟಲ್ ಕೌಶಲ್ಯಗಳನ್ನು ಬೆಳೆಸುವಲ್ಲಿ ಇಂತಹ ಘಟಕಗಳ ಮಹತ್ವವನ್ನು ಅವರು ತಿಳಿಸಿದರು.

ಶಾಲೆಯ ಲಿಟಲ್ ಕೈಟ್ ಮಾಸ್ಟರ್ ಅಧ್ಯಾಪಕರಾದ ಶ್ರೀ ರಾಜೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವo ಫಾ ಪ್ರಾನ್ಸಿಸ್ ಕ್ರಾಸ್ತಾ , ಶಾಲೆಯ ಪಿಟಿಎ ಅಧ್ಯಕ್ಷ ಶ್ರೀ ಜಯಪ್ರಕಾಶ್ , ಎಂ.ಪಿ.ಟಿ.ಎ. ಅಧ್ಯಕ್ಷೆ ಶ್ರೀಮತಿ ಸುಜಾತಾ ಎಸ್. ಎಸ್. ಜಿ ಕನ್ವಿನರ್ ಶ್ರೀ ಕಿಶೋರ್ ಕುಮಾರ್ . ಹಾಗೂ ಶಾಲಾ ಮುಖ್ಯೋಪಾಧ್ಯಾಯನಿಯ ರಾದ ಶ್ರೀಮತಿ ಸುಜಾತಾ ಉಪಸ್ಥಿತರಿದ್ದು ಶುಭಹಾರೈಸಿದರು.

ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಜ್ಞಾನ, ಕೋಡಿಂಗ್, ಅನಿಮೇಷನ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಪ್ರತಿಭೆಯನ್ನು ಬೆಳೆಸುವ ಉದ್ದೇಶದಿಂದ ಜೂನಿಯರ್ ಲಿಟ್ಲ್ ಕೈಟ್ಸ್ ಘಟಕವನ್ನು ಆರಂಭಿಸಲಾಗಿದೆ. ಈ ಘಟಕವು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯಗಳ ಅಭಿವೃದ್ಧಿಗೆ ಹಾಗೂ ಭವಿಷ್ಯದ ಡಿಜಿಟಲ್ ಜಗತ್ತಿಗೆ ಅವರನ್ನು ಸಜ್ಜುಗೊಳಿಸಲು ಸಹಕಾರಿಯಾಗಲಿದೆ ಎಂಬ ಆಶಯ ವ್ಯಕ್ತವಾಯಿತು.

ಅಧ್ಯಾಪಕಿ ಶ್ರೀಮತಿ ಸಂದ್ಯಾ ಸ್ವಾಗತಿಸಿದರು. ಶ್ರೀ ಐವನ್ ವಂದಿಸಿದರು. ಶ್ರೀಮತಿ ನೀತಾ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!