
ಮಂಗಳೂರು: ಭಾರತೀಯ ಸಂತ ಪರಂಪರೆಯ ಶ್ರೇಷ್ಠ ಸಂತರು ಹಾಗೂ ಸಮಾಜ ಸುಧಾರಕರಾದ ಸಂತ ರವಿದಾಸರ 650ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.) – ಮಂಗಳೂರು ವಿಭಾಗದ ವತಿಯಿಂದ, ಶಾರದಾ ವಿದ್ಯಾಲಯ ಕಾಲೇಜಿನ ಆಶ್ರಯದಲ್ಲಿ ‘ಭಾರತೀಯ ಸಂತ ಪರಂಪರೆ’ ವಿಶೇಷ ಉಪನ್ಯಾಸದ 21ನೇ ಕಾರ್ಯಕ್ರಮದ ಶಾರದಾ ವಿದ್ಯಾಲಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಕ್ತಿ ಮಾರ್ಗದ ಮೂಲಕ ನಾವು ಬದುಕಿನ sgresಭಾರತೀಯ ಸಂತ ಪರಂಪರೆಯು ದೇಶದ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂತರು ಕೇವಲ ಧಾರ್ಮಿಕ ಚಿಂತನೆಗಳಿಗೆ ಸೀಮಿತರಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಮತ್ತು ಜನರಲ್ಲಿ ಸಮಾನತೆಯ ಪ್ರಜ್ಞೆಯನ್ನು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ಭಕ್ತಿ ಚಳವಳಿಯ ಮೂಲಕ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ, ಮಾನವ ಧರ್ಮವೇ ಶ್ರೇಷ್ಠ ಎಂಬ ಸಂದೇಶವನ್ನು ಸಾರಿದ್ದಾರೆ. ಇಂತಹ ಸಂತ ಪರಂಪರೆಯ ಚಿಂತನೆಗಳನ್ನು ಇಂದಿನ ಯುವಜನತೆಗೆ ಪರಿಚಯಿಸುವುದು

ಸಂತ ರವಿದಾಸರು ಭಾರತೀಯ ಭಕ್ತಿ ಪರಂಪರೆಯ ಪ್ರಮುಖ ಸಂತರು. ಭಕ್ತಿ, ಸಮಾನತೆ, ಮಾನವೀಯತೆ, ಸಾಮಾಜಿಕ ಸಾಮರಸ್ಯ ಹಾಗೂ ಜಾತಿಭೇದ ರಹಿತ ಸಮಾಜದ ನಿರ್ಮಾಣದ ಸಂದೇಶವನ್ನು ಸಾರಿದ ಮಹಾನ್ ಚೇತನ ಅವರಾಗಿದ್ದಾರೆ. ತಮ್ಮ ವಚನಗಳು ಹಾಗೂ ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬಿತ್ತಿದ ಸಂತ ರವಿದಾಸರ ಜೀವನ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ.

ಶಿಕ್ಷಕರು ಸಮಾಜದ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವವರಾಗಿದ್ದು, ಭಾರತೀಯ ಪರಂಪರೆ, ಸಂತ ಸಾಹಿತ್ಯ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಕರ ಸಂಘಟನೆಯು ಇಂತಹ ಚಿಂತನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಭಾರತೀಯ ಜ್ಞಾನ ಪರಂಪರೆಯ ಮಹತ್ವವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಶಾರದಾ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


