ಮಂಜೇಶ್ವರ : 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಜೇಶ್ವರಾದ್ಯಂತ ಭಕ್ತಿ ಹಾಗೂ ಭಾವನಾಪೂರ್ಣವಾಗಿ ಆಚರಿಸಲಾಯಿತು. 1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿಯಾದ ನೆನಪಿನಲ್ಲಿ, ಈ ದಿನವನ್ನು ವಿವಿಧೆಡೆ ಸಂಭ್ರಮ ಹಾಗೂ ಘನತೆಯಿಂದ ಆಚರಿಸಲಾಯಿತು.ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಪಂಚಾಯತು ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಧ್ವಜಾರೋಹಣಗೈದರು. ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಸುನಿತಾ ಕೆ ಧ್ವಜಾರೋಹಣಗೈದರು. ಅದೇ ರೀತಿ ಪೀಸ್ ಕ್ರಿಯೇಟಿವ್ ಹೊಸಂಗಡಿ ಶಾಲೆಯಲ್ಲಿ ಶಾಲಾ ಚೇಯರ್ಮ್ಯಾನ್ ಅಬ್ದುಲ್ ರಹ್ಮಾನ್ ಅರಿಮಲ ಹಾಗೂ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್ ಧ್ವಜಾರೋಹಣಗೈದರು.
ಅದೇ ರೀತಿ ತೂಮಿನಾಡು ನವಶಕ್ತಿ ಕ್ಲಬ್ , ಅರಬ್ ರೈಡರ್ಸ್ ಕ್ಲಬ್, ಕುಂಜತ್ತೂರು ನ್ಯೂ ಸ್ಟಾರ್ ಕ್ಲಬ್, ಅಂಬಿತ್ತಾಡಿ ಮದ್ರಸ, ಅಲ್ ಫತಾಃ ಜುಮಾ ಮಸೀದಿ, ಉದ್ಯಾವರ ಜುಮಾ ಮಸೀದಿ ಸೇರಿದಂತೆ ವಿವಿಧಡೆಗಳಲ್ಲಿ ಮಕ್ಕಳಿಂದ ಹಾಡುಗಳು, ನೃತ್ಯಗಳು, ಭಾಷಣಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಶಾಲಾ ಮಕ್ಕಳಿಂದ ತ್ರಿವರ್ಣ ಧ್ವಜ ಧಾರಣೆಯ ಮೆರವಣಿಗೆ, ದೇಶಭಕ್ತಿ ಗೀತೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಾಟಕ ರೂಪಕಗಳು ಪ್ರದರ್ಶಿಸಲಾಯಿತು. ಶಿಕ್ಷಕರು ಮಕ್ಕಳಲ್ಲಿ ದೇಶಭಕ್ತಿಯನ್ನು ಉತ್ತೇಜಿಸುವ ಭಾಷಣಗಳನ್ನು ನೀಡಿದರು.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಶಿಸ್ತಿನಿಂದ ಹಾಗೂ ದೇಶಭಕ್ತಿಯ ಉತ್ಸಾಹದಿಂದ ತುಂಬಿದ ಒಂದು ಯಾದಗಾರ್ ಸಂದರ್ಭವಾಯಿತು. ಹೊಸ ತಲೆಮಾರಿಗೆ ದೇಶದ ಇತಿಹಾಸವನ್ನು ತಿಳಿಸುವ, ಅದರ ಮೇಲೆ ಹೆಮ್ಮೆ ಪಡುವಂತಹ ಈ ದಿನವು, ಪ್ರತಿಯೊಬ್ಬ ನಾಗರಿಕನಲ್ಲೂ ಜವಾಬ್ದಾರಿಯುತ ಮನೋಭಾವ ಬೆಳೆಸುವ ಕೆಲಸವನ್ನು ಮಾಡಿದೆ