ಚಿತ್ತಾರಿ ಕೋಟೆ ಶ್ರೀ ಎಲ್ಲಾಂಬಿಕಾ ದೇವಳದಲ್ಲಿ 2027ರ ಏಪ್ರಿಲ್ 23ರಿಂದ ದ್ರವ್ಯಕಲಶ ಮಹೋತ್ಸವ

ಕಾಸರಗೋಡು: ಸಪ್ತ ಭಾಷಾ ಸಂಗಮ ನೆಲ ಕಾಸರಗೋಡಿನ ಪುಣ್ಯ ಭೂಮಿಯಲ್ಲಿ ಇರುವ ಇತಿಹಾಸ ಪ್ರಸಿದ್ಧ ಚಿತ್ತಾರಿ ಕೋಟೆ ಶ್ರೀ ಎಲ್ಲಾಂಬಿಕಾ ದೇವಳದಲ್ಲಿ ದ್ರವ್ಯಕಲಶ ಮಹೋತ್ಸವವು 2027ರ ಏಪ್ರಿಲ್ 23ರಿಂದ 28ರವರೆಗೆ ಆರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ಭಗವತ್ಯೈ ರೇಣುಕಾ ಜಗದಂಬೆಯ ಅನುಗ್ರಹದೊಂದಿಗೆ ನಡೆಯಲಿರುವ ಈ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.

ಮಹೋತ್ಸವದ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲು ಭಕ್ತ ಮಹನೀಯರು ತನು, ಮನ, ಧನಗಳಿಂದ ಸಹಕರಿಸಿ ಸಹಭಾಗಿಗಳಾಗುವಂತೆ ದೇವಳದ ವತಿಯಿಂದ ವಿನಯಪೂರ್ವಕವಾಗಿ ಕೋರಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!