
ಹೊಸಂಗಡಿ: ಯುಡಿಎಫ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಎಡರಂಗ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಜನಕೀಯ ಸಂಗಮ ಕಾರ್ಯಕ್ರಮ ನಡೆಯಿತು.



ಎಲ್ಡಿಎಫ್ ಕಾಸರಗೋಡು ಜಿಲ್ಲಾ ಸಂಚಾಲಕ ಕೆ.ಪಿ. ಸತೀಶ್ ಚಂದ್ರನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಯರಾಮ್ ಬಳ್ಳಂಗುಡೆಲ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಕಡಂಬಾರ್, ಅಹಮ್ಮದಾಲಿ ಕುಂಬಳೆ, ರಘುದೇವ್ ಮಾಸ್ಟರ್, ಸುಬ್ಬಣ್ಣ ಆಳ್ವ, ಸುಬೈರ್ ಕುಂಬಳೆ, ಸಿ.ಜಿ. ಮ್ಯಾಥ್ಯೂ ಮೊದಲಾದವರು ಉಪಸ್ಥಿತರಿದ್ದರು. ಕೆ.ಆರ್. ಜಯಾನಂದ ಸ್ವಾಗತಿಸಿದರು.





