ಚಾಮುಂಡಿಕುನ್ನು ಕಳಿಯಾಟ ಮಹೋತ್ಸವಕ್ಕೆ ಶುಭಾರಂಭ

ಕಾಸರಗೋಡು: ಚಿತ್ತಾರಿ ಗ್ರಾಮದ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಕಳಿಯಾಟ ಮಹೋತ್ಸವವು ವಿವಿಧ ಧಾರ್ಮಿಕ, ದೈವಾರಾಧನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ ಸಂಭ್ರಮದಿಂದ ಆರಂಭಗೊಂಡಿತು. ಡಿಸೆಂಬರ್ 1ರವರೆಗೆ ಐದು ದಿನಗಳ ಕಾಲ ಮಹೋತ್ಸವ ನಡೆಯಲಿದೆ.

ಮಹೋತ್ಸವದ ಅಂಗವಾಗಿ ವಾರಿಕ್ಕಾಟಪ್ಪನ್ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಶ್ರೀ ತಂತ್ರಿವರ್ಯರ ದಿವ್ಯಹಸ್ತದಿಂದ ದೀಪವನ್ನು ಹಸ್ತಾಂತರಿಸುವ ಮೂಲಕ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ದೇವಸ್ಥಾನದ ವ್ಯಾಪ್ತಿಯ ಏಳು ಸ್ಥಳೀಯ ಸಮಿತಿಗಳ ಸಹಕಾರದೊಂದಿಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ದೈವಾರಾಧನಾ ಕಾರ್ಯಕ್ರಮಗಳು ನಡೆಯಲಿವೆ. ಮಹೋತ್ಸವದ ಆರಂಭದೊಂದಿಗೆ ಭಕ್ತರಲ್ಲಿ ಸಂಭ್ರಮ ಮನೆಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೈವಗಳ ಕೃಪೆಗೆ ಪಾತ್ರರಾದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!