ನಾಳೆ ಶಿವಗಿರಿ ಮಠದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

ಮಂಗಳೂರು: ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿಯವರ ಆಶ್ರಯದಲ್ಲಿ, ಶ್ರೀ ಶಿವದುರ್ಗಾಂಭ ಮಠ ಶಿವಗಿರಿ, ಮರಿಯಣ್ಣಪಾಲು, ಕೊಂಡಾಣ, ಮಾಡೂರು ಹಾಗೂ ಮಂಗಳೂರಿನ ನಾಟೆಕಲ್‌ನ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ನಾಳೆ (ನ.29) ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಆಯೋಜಿಸಲಾಗಿದೆ.

ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿವದುರ್ಗಾಂಭ ಮಠ ಶಿವಗಿರಿ ಆವರಣದಲ್ಲಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಸೊಂಟನೋವು, ಸ್ಟ್ರೋಕ್, ಮಂಡಿನೋವು, ಮೂಲವ್ಯಾಧಿ, ವಾತರೋಗ, ಅಸಿಡಿಟಿ, ಫಿಸ್ಟುಲಾ, ಅಲರ್ಜಿ, ಮಲಬದ್ಧತೆ, ಉಬ್ಬಿರುವ ರಕ್ತನಾಳಗಳ ಸಮಸ್ಯೆ (ವೆರಿಕೋಸ್ ವೇನ್ಸ್), ಅಜೀರ್ಣ, ನಿದ್ರಾಹೀನತೆ, ಅಸ್ತಮಾ, ಸೋರಿಯಾಸಿಸ್, ರಕ್ತಹೀನತೆ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಗೆ ಆಯುರ್ವೇದ ವೈದ್ಯಕೀಯ ತಪಾಸಣೆ ಹಾಗೂ ಸಲಹೆ ನೀಡಲಾಗುವುದು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಶ್ರೀ ಶಿವದುರ್ಗಾಂಭ ಮಠ ಶಿವಗಿರಿಯ ಆಡಳಿತ ಮೊಕ್ತೇಸರರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!