ಮಾದಕ ಮುಕ್ತ ಸಮಾಜಕ್ಕೆ ಕರೆ, ಸರಕಾರಿ ಪ್ರೌಢಶಾಲೆ ಮೂಡಂಬೈಲಿನಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆ

ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಮೂಡಂಬೈಲ್ ಇಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.ಶಾಲಾ ಮುಖ್ಯೋಪಾಧ್ಯಾಯೀನಿ ಶ್ರೀಮತಿ ದಯಾವತಿ ಸಾಲಿಯನ್ ಧ್ವಜಾರೋಹಣ ನಡೆಸಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದರು .

ಬಳಿಕ ಮುಖ್ಯ ಅತಿಥಿಗಳಾದ ಮಂಜೇಶ್ವರ ಜನ ಮೈತ್ರಿ ಪೊಲೀಸ್ ಅಧಿಕಾರಿಯಾದ ಮಧು ಸರ್ ಅವರು ಮಾತನಾಡಿ ನಮ್ಮ ಸಮಾಜ ಮಾದಕ ವಸ್ತುವಿನ ಪಿಡುಗುವಿನಿಂದಾಗಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ ಇದನ್ನು ಬಗೆಹರಿಸಲು ನಾವೆಲ್ಲರೂ ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ಕೈಜೋಡಿಸಬೇಕಾಗಿ ವಿನಂತಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಅಬ್ದುಲ್ ಪಜಿಂಗಾರ್ ಅವರು ವಹಿಸಿದ್ದರು.ಗೌರವ ಉಪಸ್ಥಿತಿಯಾಗಿ ವಾರ್ಡ್ ಸದಸ್ಯರಾದ ಹಾಗೂ ಮೀಂಜ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಜಯರಾಮ್ ಬಲ್ಲ೦ಗೂಡೇಲ್ ಆಸೀನರಾಗಿದ್ದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಶತಮಾನೋತ್ಸವದ ಅಧ್ಯಕ್ಷರಾದ ನ್ಯಾಯವಾದಿ ಶ್ರೀಯುತ ದಾಮೋದರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಮ್ ಪ್ರಕಾಶ್ ಹೊಳ್ಳ ,ಬಶೀರ್ ಮೂಡಂಬೈಲ್, ಅನಂತ ಪದ ಕಣ್ಣಾಯ, ರಮೇಶ್ ಸುವರ್ಣ, ಜಗದೀಶ್ ಮೂಡಂಬೈಲು, ಎಂ ಪಿ ಟಿ ಎ ಅಧ್ಯಕ್ಷರಾದ ಶ್ರೀಮತಿ ಅನುಪಮಾ ನಾಯಕ್, ಹಾಗೂ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸುನಿತಾ ಮೊದಲಾದವರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನದ ಮಹತ್ವದ ಕುರಿತು ತಿಳಿಸಿದರು. ಮತ್ತು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅಧ್ಯಾಪಕಗಳಾದ ಶ್ರೀ ಜಾಫರ್ ಸರ್ ಶ್ರೀ ಪ್ರತೀಕ್ ಜಯಪ್ರಕಾಶ್ ಅಧ್ಯಾಪಿಕೆಯರಾದ ಶ್ರೀಮತಿ ನಿವೇದಿತ, ಶ್ರೀಮತಿ ಮೋಹಿನಿ ಟೀಚರ್, ರಹನ ಟೀಚರ್,ರಮ್ಲ ಟೀಚರ್,ಶ್ರೀಮತಿ ಸವಿತಾ , ಕುಮಾರಿ ಸುಷ್ಮಾ ಹಾಗೂ ಆರೂನ್, ಶೈನಿ ಮೊದಲಾದವರು ಸಹಕರಿಸಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಮೂಹಗಿತೆ ,ನೃತ್ಯ , ಹಾಗೂ ಕನ್ನಡ, ತುಳು, ಮಲಯಾಳಂ, ಹಿಂದಿ, ಇಂಗ್ಲಿಷ್, ಅರಬ್ಬಿ ಭಾಷೆಗಳಲ್ಲಿ ಸ್ವಾತಂತ್ರ್ಯದ ಕುರಿತಾದ ಸಂದೇಶ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಆ ಬಳಿಕ ವಿದ್ಯಾರ್ಥಿಗಳಿಗೆ ಪಾಯಸ ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು.

ರಾಜೇಶ್ ಕೊಡ್ಲಮೊಗರು ಸ್ವಾಗತ ಭಾಷಣ ನಡೆಸಿದರು ಹಾಗೂ ತ್ರಿಲತ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತ್ತು

SHARE
Loading spinner

Leave a Reply

Your email address will not be published. Required fields are marked *

error: Content is protected !!