ಪಾವೂರು :ಪೊಯೈಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಇದರ ಜಂಟಿ ಆಶ್ರಯದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮವು ಕ್ಷೇತ್ರದ ಅಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ಕೆದುಂಬಾಡಿ ಇವರ ನೇತೃತ್ವದಲ್ಲಿ ಉದ್ಘಾಟಿಸಲ್ಪಟ್ಟಿತು. ನಂತರ ವಿವಿಧ ಸ್ಪರ್ಧೆಗಳು ನಡೆದವು. ಅದರಲ್ಲಿ ಮುಖ್ಯವಾಗಿ ಪುಟಾಣಿ ಮಕ್ಕಳಿಂದ ಕೃಷ್ಣನ ವೇಷವು ಕಣ್ಮನ ಸೆಳೆಯಿತು.
ಸಂಜೆ ಹೊತ್ತಿನಲ್ಲಿ ನಡೆದ ಸಮರೋಪ ಸಮಾರಂಬದ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷರಾದ ಮೋನಪ್ಪ ಶೆಟ್ಟಿ ಮುಟ್ಲ ವಹಿಸಿದ್ದರು. ಸಭೆಯಲ್ಲಿ ಮುಖ್ಯವಾಗಿ ಶ್ರೀಧರ ಶೆಟ್ಟಿ ಪಾವೂರು ಗುತ್ತು, ವಿಶ್ವಂಬರ ನಾಯ್ಕ್ ಮಳಿಗುತ್ತು, ಬಾವಳಿ ಗುಳಿ ಸಾರ್ವಜನಿಕ ಗಣೇಶೋತ್ಸವ ದ ಅಧ್ಯಕ್ಷರಾದ ವಿಶ್ವನಾಥ ರೈ ಅಡ್ಕ ,ಗೌರವ ಸಲಹೆಗಾರರಾದ ಶಂಕರ್ ನಾರಾಯಣ ಮರಿಕಾಪು ,ತಿಯವೆಲ್ಫರ್ ಸಮಿತಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಗಣೇಶ್ ಪಾವೂರು, ಕ್ಷೇತ್ರ ಆಡಳಿತ ಸಮಿತಿಯ ಸದಸ್ಯರಾದ ತ್ಯಾಂಪಣ್ಣ ರೈ ಪಾವೂರು, ದಯಾನಂದ ಸಾಲಿಯನ್ ಕೊಪ್ಪಳ, ರವಿ ಮುಡಿಮಾರ್, ಅಲ್ಲದೆ ಅಶೋಕ್ ಪಾವೂರು, ಸದಾಶಿವ ಶೆಟ್ಟಿ ಬಾವಳಿ ಗುಳಿ ಉಪಸ್ಥಿತರಿದ್ದರು. ನಂತರ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ನಡೆಯಿತು. ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ಭೋಜ ಮಾಸ್ಟರ್ ಸ್ವಾಗತ ಸ್ವಾಗತಿಸಿ ವಿಶ್ವನಾಥ ಶೆಟ್ಟಿ ಕೋಡಿಮುಗೆರು ವಂದಿಸಿದರು. ನಂತರ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆಯು ನಡೆಯಿತು.