ಯುವಶಕ್ತಿ ಫ್ರೆಂಡ್ಷ್ ಸರ್ಕಲ್ ಮತ್ತು ಲೈಬ್ರೆರಿ (ರಿ) K.G.D 6412
ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಅಂಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಮಾಡಿ ಮಾತನಾಡಿದರು.ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಶಕ್ತಿಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ಮನೋಜ್ ಕುಮಾರ್ ವಹಿಸಿದರು.
ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ. ಯುವಶಕ್ತಿ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ,ಯುವಶಕ್ತಿ ಲೈಬ್ರೆರಿ ಕಾರ್ಯದರ್ಶಿ ರವಿಂದ್ರ ಶೆಟ್ಟಿ ಬೊಳ್ಳಾರು,. ಶ್ರೀಧರ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಧನರಾಜ್ ಸುಭಾಷ್ ನಗರ ಕಾರ್ಯಕ್ರಮವನ್ನು ನಿರೂಪಿಸಿದರು.ಯುವಶಕ್ತಿಫ್ರೆಂಡ್ಸ್ ಸರ್ಕಲ್ ಕಾರ್ಯದರ್ಶಿ ದೇವದಾಸ್ ಸಾಲಿಯಾನ್ ಸ್ವಾಗತಿಸಿ ಜನಾರ್ಧನ ಕುಲಾಲ್ ವಂದಿಸಿದರು.
ವನಿತಾ.ಆರ್ ಶೆಟ್ಟಿ, ಸುಜಾತಾ ದಿನೇಶ್ ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ ಕಾರ್ಯಕಾರಿ ಸದಸ್ಯ ಡಾ.ಮೋಹನ್ ಬೊಳ್ಳಾರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಗಳಿಸಿದ 6 ವಿದ್ಯಾರ್ಥಿ ಗಳಿಗೆ ಹಾಗು ಮಂಗಲ್ಪಾಡಿ ಪಂಚಾಯತ್ ನ 8 ನೇ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ ಮಂಜೇಶ್ವರ, ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಇವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ನಂತರ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.