ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9 ರಂದು. CPR V/S BSR. “ದಕ್ಷಿಣಾಸ್ತ್ರಕ್ಕೆ” ವೇದಿಕೆ ಸಜ್ಜು

ಮುಂಬರುವ ಉಪರಾಷ್ಟ್ರಪತಿ ಚುನಾವಣೆಯು ಎರಡು ಒಕ್ಕೂಟಗಳ ಮಧ್ಯೆ ನಡೆಯುವ ಸ್ಪರ್ಧೆಗಿಂತಲೂ ದಕ್ಷಿಣದ ಎರಡು ರಾಜ್ಯಗಳ ಮಧ್ಯೆ ನಡೆಯುವ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದೆ .
NDA ತನ್ನ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ನಾಮಪತ್ರ ಸಲ್ಲಿಸಿದ್ದಾರೆ. ಸಿಪಿ ರಾಧಾಕೃಷ್ಣನ್ ತಮಿಳುನಾಡಿನ ಹಿರಿಯ ಬಿಜೆಪಿ ನಾಯಕರಾಗಿದ್ದು ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯ ಕರ್ತರಾಗಿದ್ದರೆ. 1974 ರಲ್ಲಿ ಭಾರತೀಯ ಜನ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಕೊಯಂಬತ್ತೂರು ಲೋಕ ಸಭಾ ಕ್ಷೇತ್ರದಿಂದ ಎರಡು ಭಾರಿ ಸಂಸದರಾಗಿ , ಈ ಕ್ಷೇತ್ರದಿಂದ ದಾಖಲೆಯ ಅಂತರದಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದರು.

ಸೌಮ್ಯ ಸ್ವಭಾವದ ವ್ಯಕ್ತಿತ್ವ , ರಾಜಕೀಯ ಅನುಭವವಿರುವ ಅಜಾತ ಶತ್ರುವಾಗಿ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷದ ನಾಯಕರೊಂದಿಗೆ ಸೌಹಾರ್ದಯುತವಾದ ನಂಟು ಹೊಂದಿದ್ದರು. ತಮಿಳುನಾಡಿನಲ್ಲಿ ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣಾ ದೃಷ್ಟಿಯಿಂದ ಬಿಜೆಪಿ ಒಕ್ಕೂಟ ಇವರ ಆಯ್ಕೆಗೆ ಹೆಚ್ಚಿನ ಮಹತ್ವ ನೀಡಿದೆ. OBC ವಿಭಾಗಕ್ಕೆ ಒಳಪಡುವ ಗೌನ್ಡರ್ ಸಮುದಾಯಕ್ಕೆ ಸೇರಿದ ಇವರ ಆಯ್ಕೆಯಿಂದ ವಿಧಾನ ಸಭಾ ಚುನಾವಣೆಯಲ್ಲಿ ಈ ಸಮುದಾಯದ ಮತಗಳನ್ನು ತಮ್ಮ ತೆಕ್ಕೆಗೆ ಹಾಕುವ ಮೂಲಕ ರಾಜ್ಯದಲ್ಲಿ ಬಿಜೆಪಿ ಪ್ರಾಭಲ್ಯವನ್ನು ಹೆಚ್ಚಿಸುವ ಯೋಜನೆ NDA ದ್ದಾಗಿದೆ.

ರಾಜ್ಯದಲ್ಲಿ ಪಕ್ಷದ ಬಲವರ್ಧನೆಯ ಜೊತೆಗೆ ವಿಪಕ್ಷ ಒಕ್ಕೂಟವಾದ INDIA ಗೆ ಠಕ್ಕರ್ ಕೊಡುವ ಉದ್ದೇಶದಿಂದಲೂ ಈ ಆಯ್ಕೆ ನಡೆದಿದೆ ಎನ್ನಲಾಗಿದೆ. ವಿಪಕ್ಷ ಒಕ್ಕೂಟವಾದ INDIA ನಲ್ಲಿ ಗುರುತಿಸಿಕೊಂಡಿರುವ DMK ಗೆ CPR ಆಯ್ಕೆಯಿಂದ ತೀವ್ರ ಇರಿಸು ಮುರಿಸು ಉಂಟಾಗಿದೆ.
ಅಂದರೆ ರಾಜ್ಯದ ಹಿತಾಸಕ್ತಿಯಿಂದ CPR ರವರಿಗೆ ಬೆಂಬಲಿಸಿದ್ದಲ್ಲಿ ಒಕ್ಕೂಟ ನಾಯಕರ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಆತಂಕ ಒಂದೆಡೆಯಾದರೆ ತನ್ನದೇ ರಾಜ್ಯದ ಅಭ್ಯರ್ಥಿಯನ್ನ ಬೆಂಬಲಿಸದಿದ್ದಲ್ಲಿ ಮುಂಬರುವ ವಿಧಾನ ಸಭಾ ಚುನಾವಣಾ
ಪ್ರಚಾರದ ಕಾರ್ಯದಲ್ಲಿ ಬಿಜೆಪಿಗೆ ಇದೊಂದು ಚುನಾವಣಾ ಅಸ್ತ್ರ ವಾಗಬಹುದೆಂಬ ಭಯ DMK ಗೆ ಇದೆ.

ಆಡಳಿತ ರೂಢ NDA ಪ್ರತಿ ತಂತ್ರ ರೂಪಿಸಿದ ಪ್ರತಿ ಪಕ್ಷ ಒಕ್ಕೂಟವಾದ INDIA ದಕ್ಷಿಣದ್ದೇ ರಾಜ್ಯವಾದ ಆಂಧ್ರ ಪ್ರದೇಶ ಮೂಲದ ಬಿ. ಸುದರ್ಶನ್ ರೆಡ್ಡಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯದೀಶರಾದ ಇವರು ಗೋವಾ ರಾಜ್ಯದ ಮೊತ್ತ ಮೊದಲ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
2007 -2011 ರ ವರೆಗೆ ಸುಪ್ರೀಕೋರ್ಟ್ ನ್ಯಾಯಾಧೀಶರಾಗಿ ಸಾಮಾಜಿಕ ನ್ಯಾಯ , ನಾಗರೀಕ ಹಕ್ಕು, ಧೀನ ದಲಿತರ , ಶೋಷಿತ ವರ್ಗದವರ ಪರವಾಗಿ ಶೀಘ್ರವಾಗಿ ನ್ಯಾಯ ತೀರ್ಮಾನ ನೀಡುತ್ತಾರೆ ಎಂಬ ಹೆಗ್ಗೆಲಿಕೆ ಇವರದ್ದಾಗಿದೆ.


ಪ್ರಸ್ತುತ ಚುನಾವಣೆಯಲ್ಲಿ NDA ಒಕ್ಕೂಟಕ್ಕೆ ಸ್ಪಷ್ಟ ಬಹುಮತವಿದ್ದು ವಿರೋಧ ಪಕ್ಷದ ಅಭ್ಯರ್ಥಿ ಸೋಲುವುದು ಖಚಿತವಾದರೂ ವಿಪಕ್ಷಗಳು ತನ್ನ ಅಭ್ಯರ್ಥಿಯನ್ನ ನಿಲ್ಲಿಸಿದೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ಪ್ರದರ್ಶನ , ಬಿಜೆಪಿಯ ಸುಲಭದ ಗೆಲುವಿಗೆ ತಡೆ ಹಾಕುವುದು ಆಗಿದ್ದು ಸೈಧಾಂತಿಕ ನೆಲೆಗಟ್ಟಿನಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜೊತೆಗೆ NDA ಒಕ್ಕೂಟವಾದ TDP ಗೆ ಠಕ್ಕರ್ ಕೊಡುವ ಉದ್ದೇಶದಿಂದಲೂ ಈ ಆಯ್ಕೆ ನಡೆದಿದೆ. ಅಂದರೆ BSR ಗೆ ಬೆಂಬಲಿಸದೆ ವಿರೋಧ ವ್ಯಕ್ತ ಪಡಿಸಿದ್ದಲಿ ಚಂದ್ರಬಾಬು ನಾಯ್ಡು ನೇತೃತ್ವದ TDP ಆಂಧ್ರ ಜನತೆಯ ಕೆಂಗಣ್ಣಿಗೆ ಗುರಿಯಾಗುವುದರಲ್ಲಿ ಸಂದೇಹವಿಲ್ಲ .
ಹಾಗಂತ ಒಕ್ಕೂಟದ ನಾಯಕರ ಕೆಂಗಣ್ಣಿಗೂ ಗುರಿಯಾಗುವುದು ನಾಯ್ಡುಗೆ ಸುಲಭದ ಮಾತಲ್ಲ.ಆಡಳಿತ ರೂಢ NDA DMK ಗೆ ಇರಿಸು ಮುರಿಸು ಉಂಟು ಮಾಡಿದರೆ ವಿಪಕ್ಷವಾದ INDIA TDP ಇರಿಸು ಮುರಿಸು ಉಂಟುಮಾಡುವಲ್ಲಿ ಯಶಸ್ವಿಯಾಯಿತು.

ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥರಾದ ಉಪರಾಷ್ಟ್ರಪತಿ ಚುನಾವಣೆಯು ಸೆಪ್ಟೆಂಬರ್ 9 ರಂದು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ತನ್ನ ಹುದ್ದೆಗೆ ಇತ್ತೀಚಿಗೆ ಧಿಡೀರ್ ರಾಜೀನಾಮೆ ನೀಡಿದ ಕಾರಣ ಈ ಸ್ಥಾನ ತೆರವು ಆಗಿದೆ.ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ ಹಾಗೂ ಲೋಕಸಭೆ ಯ ಚುನಾಯಿತ ಪ್ರತಿನಿಧಿಗಳು ಹಾಗೂ ನಾಮನಿರ್ದೇಶನಗೊಂಡ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು.ಸಂವಿಧಾನದ 68 ನೇ ವಿಧಿ ಕಾಲಂ 2 ರ ಪ್ರಕಾರ ಉಪರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆಗಳು ನಡೆಯುತ್ತದೆ.

ಈ ಪ್ರಕಾರವಾಗಿ ಭಾರತೀಯ ಚುನಾವಣಾ ಆಯೋಗವು ದೇಶದ 17 ನೇ ಉಪರಾಷ್ಟ್ರಪತಿ ಚುನಾವಣೆಗೆ ದಿನಾಂಕವನ್ನು ಘೋಷಿಸಿದ್ದು ಆಗಸ್ಟ್ 7 ರಂದು ಚುನಾವಣೆಯ ಅಧಿಸೂಚನೆ ಹೊರಡಿಸಲಿದೆ.ಆಗಸ್ಟ್ 21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆಗಸ್ಟ್ 25 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಪ್ರಸ್ತುತ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಲೆಕ್ಕಾಚಾರದ ಪ್ರಕಾರ ಆಡಳಿತರೂಢ NDA ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ ವಿದ್ದು ತನ್ನ ಅಭ್ಯರ್ಥಿ ಗೆಲುವು ಖಚಿತ ವಾಗಿದೆ. ಅಭ್ಯರ್ಥಿ ಗೆಲ್ಲಬೇಕಾದ ಮ್ಯಾಜಿಕ್ ಸಂಖ್ಯೆ 394 ಆಗಿದೆ. ಸದ್ಯ ಉಭಯ ಸದನಗಳಲ್ಲಿ NDA ಈ ಮ್ಯಾಜಿಕ್ ಸಂಖ್ಯೆ ಯನ್ನು ಸುಲಭವಾಗಿ ದಾಟಬಹುದು. ಅಂದರೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ವಿವಿಧ ಮೈತ್ರಿಕೂಟ ಹಾಗೂ ಪಕ್ಷತೆರ ಸಹಿತ 786 ಸದಸ್ಯರು ಇದ್ದಾರೆ.ಇದರಲ್ಲಿ ಲೋಕಸಭೆ ಯಲ್ಲಿ N D A 293 , INDIA 236, ಇತರ 13 ಸದಸ್ಯರು ಇದ್ದಾರೆ.

ರಾಜ್ಯಸಭೆ ಯಲ್ಲಿ NDA 129. INDIA 87 ಮತ್ತು ಇತರ 20 ಸದಸ್ಯರು ಇದ್ದಾರೆ.ಈ ಪ್ರಕಾರವಾಗಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ NDA ಗೆ ಸುಮಾರು 422 ಸದಸ್ಯರ ಬಲವಿದೆ.ಸಂವಿಧಾನದ ವಿಧಿಯ ಪ್ರಕಾರ ಉಪರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿದ್ದು ಸಭೆಯ ಕಾರ್ಯಕಲಾಪವನ್ನು ಸುಸೂತ್ರವಾಗಿ ನಡೆಸುವ ಮಹತ್ತರ ಜವಾಬ್ದಾರಿ ಇವರಿಗೆ ಇದೆ.ರಾಷ್ಟ್ರಪತಿಯ ನಂತರ ದೇಶದ ಅತ್ಯುನ್ನತ ಸಾಂವಿಧಾನಿಕ ಅಧಿಕಾರಿಯಾಗಿದ್ದಾರೆ.ಉಪರಾಷ್ಟ್ರ ಪತಿ ಹುದ್ದೆಗೆ ಸ್ಪರ್ದಿಸುವ ಅಭ್ಯರ್ಥಿ ಯು ಕೆಲವು ಮಾನದಂಡಗಳ ಜೊತೆಗೆ 15000 ರು ಗಾಲ ಠೇವಣಿ ಇಡಬೇಕು ಜೊತೆಗೆ 20 ಸದಸ್ಯಸರು ಇವರ ನಾಮಪತ್ರ ವನ್ನು ಅನುಮೋದಿಸಬೇಕು ಮತ್ತು ಸೂಚಿಸಬೇಕು ಈಗಾಗಲೇ ಉಪರಾಷ್ಟ್ರ ಪತಿ ಚುನಾವಣೆ ಯ ಕಾವು ಅಧಿಕವಾಗಿದ್ದು ಸಮರ್ಥ ಹಾಗೂ ಅನುಭವಿ ಉಪರಾಷ್ಟ್ರ ಪತಿ ಯನ್ನು ನೋಡುವ ತವಕದಲ್ಲಿ ದೇಶವಿದೆ.ಸದನದ ಸಂಪ್ರದಾಯ ಮತ್ತು ರೂಡಿ ಯಾಗಿದೆ .ಆದರೆ ಇತ್ತೀಚ್ಚಿನ ವರ್ಷ ಗಳಲ್ಲಿ ಈ ಸಂಪ್ರದಾಯ ಮರೆಯಾಗಿದ್ದು ರಾಜಕೀಯ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಾಡಾಗುತ್ತಿದೆ.

✍️ಸುರೇಶ್ ಮಂಗಲ್ಪಾಡಿ

SHARE
Loading spinner

Leave a Reply

Your email address will not be published. Required fields are marked *

error: Content is protected !!