ಎಸ್ಯಾಸಾಫ್ಟ್ ಯುವಕರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಿದೆ. -ಶಾಸಕ ಉಮಾನಾಥ್ ಕೋಟ್ಯಾನ್

ಮಂಗಳೂರು: ಎಸ್ಯಾಸಾಫ್ಟ್ ಅತ್ಯಾಧುನಿಕ ಕಲಿಕೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಕೇಂದ್ರ ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಲಿದ್ದು ಇದು ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಿದೆ ಎಂದು ಮೂಡಬಿದರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಹೇಳಿದರು

ಬಜ್ಪೆಯ ಎಸ್ಯಾಸಾಫ್ಟ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತೀ ಹಳ್ಳಿಯೂ ಬೆಳೆದಾಗ ದೇಶ ಬೆಳೆಯುತ್ತದೆ. ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ನೀಡುವುದರಿಂದ ನಿರುದ್ಯೋಗ ನಿವಾರಣೆಯ ಜೊತೆಗೆ ಅವರ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ. ಇಂಜಿನಿಯರಿನ್, ಸಿ ಎ, ಮೆಡಿಕಲ್ ಕ್ಷೇತ್ರದತ್ತ ಮಾತ್ರ ಯುವಕರು ಹೆಚ್ಚು ಆಸಕ್ತಿಯನ್ನು ತೋರುತ್ತಾರೆ. ಯುವ ಜನರು ಇಂತಹ ಕೌಶಲ್ಯ ವೃತ್ತಿಯನ್ನು ನೀಡುವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಗುರು ಬೆಳದಿಂಗಳು ಟ್ರಸ್ಟ್ ನ ಸ್ಥಾಪಕಾಧ್ಯಕ್ಷರು ಮತ್ತು ನ್ಯಾಯವಾದಿಗಳು ಆಗಿರುವ ಪದ್ಮರಾಜ್ ಪೂಜಾರಿ ಮಾತನಾಡಿ, ಮಂಗಳೂರಿನಲ್ಲಿ ಅಭಿವೃದ್ಧಿಗೆ ಪೂರಕವಾಗಿರುವ ಆರೋಗ್ಯ ವ್ಯವಸ್ಥೆ, ರಸ್ತೆ, ವಿಮಾನ ನಿಲ್ದಾಣ, ಬಂದರು, ರೈಲ್ವೇ ವ್ಯವಸ್ಥೆಗಳಿವೆ ಇವುಗಳ ಜೊತೆಗೆ ಇಂತಹ ಸಂಸ್ಥೆಗಳ ಒಗ್ಗೂಡುವಿಕೆಯು ಕರಾವಳಿಯ ಸಮಗ್ರ ಅಭಿವೃದ್ಧಿಗೆ ಸಹಕಾರಿ ಆಗಲಿದೆ.

ಎಸ್ಯಾಸಾಫ್ಟ್. ಸಂಸ್ಥಾಪಕ ಮತ್ತು ಗುಂಪು ಸಿ ಇ ಓ ಬಿಪಿನ್ ಚಂದ್ರ ಮಾತನಾಡಿ,ಇಂಧನ ಪರಿವರ್ತನೆಯಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿರುವ ಎಸ್ಯಾಸಾಫ್ಟ್ ಭಾರತದ ಇಂಧನ ಮತ್ತು ಉಪಯುಕ್ತತೆ ವಲಯದ ಉತ್ತಮ ಭವಿಷ್ಯದ ದೃಷ್ಟಿಯಿಂದ ಕಾರ್ಯಪಡೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದರು .ಕಾರ್ಯಕ್ರಮದಲ್ಲಿ ಪ್ರಮೀಳಾ ಕ್ರಾಸ್ತಾ, ಶಾಲಿನಿ ಮುಂತಾದವರು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!