ಕಣ್ಣೂರು: ಕಣ್ಣೂರಿನ ಕನ್ನಪುರಂ ಬಾಡಿಗೆ ಮನೆಯೊಂದರಲ್ಲಿ ಬಾಂಬ್ ಸ್ಪೋಟಗೊಂಡು ವ್ಯತಿಯೋರ್ವನು ಮೃತ ಪಟ್ಟಿರುವಂತಹ ಘಟನೆಯೊಂದು ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ನಡೆದಿದೆ . ಬಾಂಬು ಅಥವಾ ಸ್ಪೋಟಕ ವಸ್ತು ನಿರ್ಮಾಣದ ವೇಳೆ ಸ್ಪೋಟಗೊಂಡಿರಬೇಕು ಎಂದು ಅನುಮಾನವಿದೆ . ಭಾರೀ ಸ್ಪೋಟದ ಶಬ್ದ ಕೇಳಿ ಎಚ್ಚರಗೊಂಡು ಓಡಿ ಬ೦ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ.
ಗೋವಿ೦ದನ್ ಎ೦ಬವರ ಮಾಲಕತ್ವದ ಮನೆ ಇದಾಗಿದ್ದು ಅನೂಪ್ ಎಂಬವರಿಗೆ ಬಾಡಿಗೆಗೆ ನೀಡಲಾಗಿತ್ತು. ಇದೀಗ ಮೃತಪಟ್ಟವರ ಮಾಹಿತಿ ಲಭ್ಯವಾಗಿಲ್ಲ. ಬಹುಶಃ ಇವರು ಅನ್ಯ ರಾಜ್ಯ ಕಾರ್ಮಿಕರಿರಬೇಕು ಎಂದು ಶಂಕಿಸಲಾಗಿದೆ.
ಸ್ಪೋಟದಿಂದಾಗಿ ಮನೆ ಪೂರ್ಣವಾಗಿಯೂ ದ್ವಂಸಗೊಂಡಿದೆ. ಸಮೀಪದ ಮನೆಗಳಿಗೂ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಪೊಲೀಸರು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ .