ಕೇಂದ್ರ ಹಾಗೂ ಕೇರಳ ಸರಕಾರಗಳ ದುರಾಡಳಿತಗಳಿಂದ ಜನಸಾಮಾನ್ಯರು ತೊಂದರೆಯಲ್ಲಿ -ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳು ನೆಲ ಕಚ್ಚಲಿವೆ- ಶ್ರೀ ಸುಂದರ ಆರಿಕ್ಕಾಡಿ

ಕೇಂದ್ರ ಹಾಗೂ ಕೇರಳ ಸರಕಾರಗಳ ದುರಾಡಳಿತಗಳಿಂದ ಜನಸಾಮಾನ್ಯರು ರೋಸಿ ಹೋಗಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ನೆಲ ಕಚ್ಚಲಿವೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸುಂದರ ಆರಿಕ್ಕಾಡಿ ಹೇಳಿದ್ದಾರೆ.
ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ ಶ್ರೀ ಉಮ್ಮರ್ ಬೋರ್ಕಳರ ನಿವಾಸದಲ್ಲಿ ನಡೆದ ಮಂಡಲ ಮಟ್ಟದ ಕಾಂಗ್ರೆಸ್ ಗೃಹಸಂದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಗೃಹಸಂದರ್ಶನ ಕಾರ್ಯಕ್ರಮದ ಉದ್ದೇಶಗಳ ಕುರಿತು ವಿವರಣೆ ನೀಡಿದರು.


ಶ್ರೀ ಪುರುಷೋತ್ತಮ ಅರಿಬೈಲ್ ರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೇತಾರರಾದ ಶ್ರೀ ಮುಹಮ್ಮದ್ ಮಜಾಲ್, ಕೆ.ಸದಾಶಿವ,ಫ್ರಾನ್ಸಿಸ್ ಡಿ’ಸೋಜಾ, ಮೂಸಾ ಧರ್ಮನಗರ, ಉಮ್ಮರ್ ಪಾಲೆಂಗ್ರಿ, ಎಲಿಯಾಸ್ ಡಿ’ಸೋಜಾ, ಐತಪ್ಪ ನೀರೊಳಿಕೆ, ಮಹಮೂದ್ ಅಣೆ, ರಝಾಕ್, ಹಮೀದ್ ಕಣಿಯೂರು, ಮೂಸಾ ಅಣೆ,ಹಮೀದ್ ಟೌನ್ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಎ.ಎಂ ಉಮ್ಮರ್ ಕುಂಞಿ ಸ್ವಾಗತಿಸಿ, ಶ್ರೀ ಖಲೀಲ್ ಬಜಾಲ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!