ಮಂಜೇಶ್ವರ : ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಪ್ರಯಾಣಿಕರನ್ನು ಹೇರಿ ಕೊಂಡು ಸಾಗುತಿದ್ದ ಕರ್ನಾಟಕ ಸಾರಿಗೆ ಬಸ್ಸು ತೂಮಿನಾಡು ಜಂಕ್ಷನ್ ತಲುಪುತಿದ್ದಂತೆ ಬಾಗಿಲಿನ ಸಮೀಪದಲ್ಲಿ ನಿಂತಿದ್ದ ಪ್ರಯಾಣಿಕರೊಬ್ಬರು ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟು ಗಂಭಿರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಗಾಯಾಳುವನ್ನು ಕುಂಜತ್ತೂರು ಸನ್ನಡ್ಕ ಪರಿಸರವಾಸಿ ಶಿವರಾಜ್ ಎಂಬುದಾಗಿ ತಿಳಿದು ಬಂದಿದೆ. ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಬಾಗಿಲುಗಳನ್ನು ಮುಚ್ಚದೆ ಪ್ರಯಾಣಿಕರನ್ನು ಹೇರಿಕೊಂಡು ಹೋಗುತ್ತಿರುವುದು ಇಂತಹ ಅಪಘಾತಗಳಿಗೆ ಕಾರಣವಾಗುತ್ತದೆ.
ಸ್ಥಳೀಯರು ಬಸ್ಸನ್ನು ಕೆಲ ಸಮಯ ತಡೆದು ನಿಲ್ಲಿಸಿ ಬಳಿಕ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿದ ಬಳಿಕ ಬಸ್ಸು ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.