ಸೆಪ್ಟೆಂಬರ್ – 5 ರಂದು ಪ್ರವಾದಿ ಮುಹಮ್ಮದ್(ಸ.ಅ) ಪೈಗಂಬರರ ಜನ್ಮದಿನವಾದ ಈದ್ ಮೀಲಾದ್ ಹಬ್ಬ ಆಚರಣೆ

ಮಂಗಳೂರು: ಈ ತಿಂಗಳ ೫ ನೇ ತಾರೀಖಿನಂದು ಪ್ರವಾದಿ ಮುಹಮ್ಮದ್(ಸ.ಅ) ಪೈಗಂಬರರ ಜನ್ಮದಿನವಾದ ಈದ್ ಮೀಲಾದ್ ಹಬ್ಬದ ಆಚರಣೆ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ತಿಳಿಸಿದರು.

ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವರ್ಷಂಪ್ರತೀ ನಡೆಸಿಕೊಂಡು ಬರುವಂತೆ. ಈ ವರ್ಷವೂ ಕೂಡ ಉಳ್ಳಾಲ ಜುಮ್ಮಾ ಮಸ್ಟಿದ್ ಮತ್ತು ಹಝ್ರತ್ ಸಯ್ಯದ್ ಮದನಿ ದರ್ಗಾದ ವತಿಯಿಂದ 27 ಮೊಹಲ್ಲಾಗಳ ಮತ್ತು 32 ಮದ್ರಸಗಳ ವಿದ್ಯಾರ್ಥಿಗಳು ಹಾಗೂ ಉಳ್ಳಾಲ ಮೊಹಲ್ಲಾ ನಿವಾಸಿಗಳಿಂದ ಬ್ರಹತ್ ಸ್ವಲಾತ್ ಮೆರವಣಿಗೆಯು ನಡೆಯಲಿದೆ. ಬೆಳಗ್ಗೆ ಗಂಟೆ 7.00ಕ್ಕೆ ಸರಿಯಾಗಿ ಕೋಟೆಪುರ ಜುಮ್ಮಾ ಮಸ್ಟಿದ್ ವಠಾರದಿಂದ ವಾಹನ ಮತ್ತು ಕಾಲ್ನಡಿಗೆಯ ಮೂಲಕ ಮೆರವಣಿಗೆಯು ಹೊರಟು, ಪೇಟೆ- ಅಬ್ಬಕ್ಕ ವೃತ್ತ- ಮುಕ್ಕಚ್ಚೇರಿ- ಆಝಾದ್ ನಗರದಿಂದಾಗಿ ಉಳ್ಳಾಲ ಜುಮಾ ಮಸ್ಟ್ರಿದ್ ವಠಾರದಲ್ಲಿ ಕೊನೆಗೊಳ್ಳಲಿರುವುದು . ಈ ಕಾಲ್ನಡಿಗೆಯ ನಡಿಗೆಯಲ್ಲಿ ಪ್ರವಾದಿಗಳ ಆದರ್ಶವನ್ನು ತಿಳಿಸಲಾಗುವುದೆಂದು ತಿಳಿಸಿದರು .

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಪಿ, ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ , ರೈಟ್ ವೇ , ಕೋಶಾಧಿಕಾರಿ ನಾಝಿಮ್ ರಹ್ಮಾನ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!