ವೆನ್ಲಾಕ್ ಆಸ್ಪತೆಯ ಮೂಲ ಸೌಕರ್ಯವನ್ನು ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುವ ಉದ್ದೇಶದಿಂದ ವಿಭಾಗೀಯ ಆಸ್ಪತ್ರೆಯನ್ನಾಗಿ ಮಾಡಲು ಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದು -ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ

ವೆನ್ಲಾಕ್ ಆಸ್ಪತೆಯ ಮೂಲ ಸೌಕರ್ಯವನ್ನು ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುವ ಉದ್ದೇಶದಿಂದ ವಿಭಾಗೀಯ ಆಸ್ಪತ್ರೆಯನ್ನಾಗಿ ಮಾಡಲು ಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದೆಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಹೇಳಿದರು.

ಅವರು ಮನಪಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ , ವೆನ್ಲಾಕ್ ಆಸ್ಪತೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಮಾಡಿದರೆ ಈಗ ಇರುವ ೪೦೦ ಸಿಬ್ಬಂದಿಗಳು ೮೦೦ ಸಿಬ್ಬಂದಿಗೆ ಹೆಚ್ಚಳವಾಗುತ್ತಾರೆ . ಇದರ ಜೊತೆಗೆ ಆಡಳಿತ ಅಧಿಕಾರಿ , ಹಣಕಾಸು ಅಧಿಕಾರಿಗಳು ಇಲ್ಲಿಗೆ ಬರುತ್ತಾರೆ .

ಒಂದು ಕೊಠಡಿಯಿಂದ ಇನ್ನೊಂದು ಕೊಠಡಿ ಗೆ ಕರೆದು ಕೊಂಡು ಹೋಗುವಾಗ ಅಂಬ್ಯುಲೆನ್ಸ್ ನಲ್ಲಿ ತುಂಬಲಾಗುತ್ತದೆ ಎಂದು ರೋಗಿಗಳು ತಮ್ಮ ಅಳಲನ್ನು ಇತ್ತೀಚಿಗೆ ವ್ಯಕ್ತ ಪಡಿಸಿದ್ದರು . ಹೀಗಾಗಿ ಅಂಬ್ಯುಲೆನ್ಸ್ ಬಗ್ಗಿ ಗೆ ಬೇಡಿಕೆ ಇತ್ತು . ಬಗ್ಗಿ ಯಲ್ಲಿ ಬೇಕಾದ ಒಕ್ಸಿಜೆನ್ , ತುರ್ತಾಗಿ ಬೇಕಾದ ಔಷಧಿಗಳು , ಸುಲಭವಾಗಿ ರೋಗಿಗಳಿಗೆ ಇಳಿಯಬಹುದು ಮತ್ತು ಹತ್ತ ಬಹುದಾದ ವ್ಯವಸ್ಥೆ ಇದೆ .

ಸುಮಾರು ೭ ಲಕ್ಷ ರೂಪಾಯಿ ಶಾಸಕ ಪ್ರದೇಶ ಅಭಿವ್ರಿದ್ದಿ ನಿಧಿಯಿಂದ ಒಂದು ಅಂಬ್ಯುಲೆನ್ಸ್ ಬಗ್ಗಿಯನ್ನು ಖರೀದಿ ಮಾಡಲಾಗಿದೆ . ಇದರ ಅವಶ್ಯಕತೆಗಳು ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಾದರೆ ಇನ್ನೊಂದು ಬಗ್ಗಿಯನ್ನು ಖರೀದಿಸುವ ಭರವಸೆಯನ್ನು ಅವರು ನೀಡಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!