ಮಂಗಳೂರು: ಸ್ವಿಂಗ್, ಕಾಯಿರ್ ಮತ್ತು ಫೋಮ್ ಹಾಸಿಗೆಗಳ ಉತ್ಕೃಷ್ಟ ಶ್ರೇಣಿಗೆ ಹೆಸರುವಾಸಿಯಾದ ಪ್ರಮುಖ ಹಾಸಿಗೆ ಬ್ರಾಂಡ್ ರೆಸೊಲೆಕ್ಸ್, ಮಂಗಳೂರಿನ ಬಲ್ಲಾಳಭಾಗ್‌ನಲ್ಲಿ ತನ್ನ ಹೊಸ ವಿಶೇಷ ಪ್ರಾಂಚೈಸಿ ಮಳಿಗೆಗೆ ಚಾಲನೆ ನೀಡಿದೆ. ನೋವಾ ಸೇಲ್ಸ್ ಸ್ಟೀಪ್ ಕಂಫರ್ಟ್ಸ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಳಿಗೆಯು, ಈ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ನಿದ್ರೆಗೆ ಅಗತ್ಯ ಪರಿಕರಗಳನ್ನು ಒದಗಿಸಲಿದೆ.
850 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಮಳಿಗೆಯು ರೆಸ್ಟೋಲೆಕ್ಸ್ ನ ಸಂಪೂರ್ಣ ಶ್ರೇಣಿಯ ಕೊಡುಗೆಗಳನ್ನು ಒಳಗೊಂಡಿದೆ. ಇದರಲ್ಲಿ ಹಾಸಿಗೆಗಳು, ದಿಂಬುಗಳು, ಬೆಡ್‌ಶೀಟ್‌ಗಳು, ಕಂಫರ್ಟರ್ಗಗಳು, ಹಾಸಿಗೆ ಕವರ್‌ಗಳು, ಬೋಲ್‌ಸ್ಟರ್‌ಗಳು(ದಿಂಬು) ಮತ್ತಿತರ ಉತ್ಪನ್ನಗಳು ಸೇರಿವೆ.
ರೆಸ್ಪೆಲೆಕ್ಸ್ ಕಾಯಿರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಡೇವಿಡ್ ಕುರುವಿಲ್ಲಾ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ರಾಘವ್ ಪೂಜಾರಿ ನೂತನ ಮಳಿಗೆಯನ್ನು ಉದ್ಘಾಟಿಸಿದರು.
‘ರೆಸೊಲೆಕ್ಸ್ ನಾಲ್ಕು ದಶಕಗಳಿಂದ ಗ್ರಾಹಕರ ಅನುಭವಗಳನ್ನು ಹೆಚ್ಚಿಸುವುದು ಮತ್ತು ಸೂಕ್ತ ಆಯ್ಕೆಗಳನ್ನು ಬೆಂಬಲಿಸುವತ್ತ ಗಮನಹರಿಸಿದೆ. ಮಂಗಳೂರಿನಲ್ಲಿರುವ ಈ ಹೊಸ ಫ್ರಾಂಚೈಸಿ ಮಳಿಗೆಯು ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದೆ’ ಎಂದರು ರೆಸ್ಟೋಲೆಕ್ಸ್ ಕಾಯಿರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಡೇವಿಡ್ ಕುರುವಿಲ್ಲಾ. ರೆಸೊಲೆಕ್ಸ್‌ನ ಸಿಇಒ ಸುರೇಶ್ ಬಾಬು ಕೂಡ ಕಂಪನಿಯ ಈ ಬಲವರ್ಧನೆ ಕುರಿತು ಪ್ರತಿಕ್ರಿಯಿಸಿದರು.
ರೆಸ್ಪೆಲೆಕ್ಟ್ ಪ್ರಸ್ತುತ ಭಾರತದಾದ್ಯಂತ 85 ಮಳಿಗೆಗಳನ್ನು, ದೇಶಾದ್ಯಂತ 3,500 ಅಧಿಕೃತ ವಿತರಕರನ್ನು ಮತ್ತು ಕರ್ನಾಟಕದಲ್ಲಿ 1,100 ಅಧಿಕೃತ ವಿತರಕರನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಶ್ರುತಿ ಕಾಮತ್ , ದಾವಿಡ್ ಕುರ್ವಿಲ್ಲ , ಶ್ರುತಿ ಕಾಮತ್ ಮುಂತಾದವರು ಉಪಸ್ಥಿತತರಿದ್ದರು.