ಮಂಗಳೂರು: ಸಮಸ್ತ ಕರ್ನಾಟಕ ಮಶಾವರ, ಎಸ್.ವೈ.ಎಸ್, ಎಸೈ.ಎಸ್.ಎಸ್.ಎಫ್ , ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್, ಮದರಸ ಮೇನೇಜೆಂಟ್, ಜಂಇಯ್ಯತುಲ್ ಖುತ್ಬಾ , ಜಂಇಯ್ಯತುಲ್ ಮುದ್ರಾಸಿನ್ , ಸಮಸ್ತ ಬಾಲ ವೇದಿ ಸಂಯುಕ್ತ ಆಶ್ರಯದಲ್ಲಿ ಇಷ್ಕೆ ರಸೂಲ್ ಕಾರ್ಯಕ್ರಮ ಹಾಗೂ ಗ್ರಾಂಡ್ ಮೀಲಾದ್ ಜಾಥಾವು ಸೆಪ್ಟೆಂಬರ್ 09 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಇಷ್ಕೆ ರಸೂಲ್ ಮೀಲಾದ್ ಸ್ವಾಗತ ಸಮಿತಿಯ ಸಂಚಾಲಕರಾದ ಯು ಕೆ ಅಬ್ದುಲ್ ಅಝೀಝ್ ದಾರಿಮಿ ತಿಳಿಸಿದರು .
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , .ಬೆಳಗ್ಗೆ 9 ಗಂಟೆಗೆ ಸರಿಯಾಗಿ ಬಾವುಟ ಗುಡ್ಡೆಯಿಂದ ಮೀಲಾದ್ ಜಾಥಾವು ಆರಂಭಗೊಂಡು ಜ್ಯೋತಿ ಸರ್ಕಲ್ ಮೂಲಕ ಹಂಪನಕಟ್ಟೆ ಮಾರ್ಗವಾಗಿ ಪುರಭವನ ತಲುಪಲಿದೆ.ನಂತರ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಮುಹಮ್ಮದ್ ಜೆಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಸ್ವೀಕರ್ ಯು ಟಿ ಖಾದರ್ ಸಹಿತ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ .
ಸೆಪ್ಟೆಂಬರ್ 09 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮದ್ರಾಸಗಳ ಮುಂಜಾನೆ ತರಗತಿಗಳಿಗೆ ರಜೆಯನ್ನು ನೀಡಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ರಫೀಕ್ ಹಾಜಿ ಕೊಡಾಜೆ., ಕೆ.ಎಲ್ ಉಮರ್ ದಾರಿಮಿ , ಹಕ್ಕಿಂ ಪರ್ತಿಪ್ಪಾಡಿ , ಇಸ್ಮಾಯಿಲ್ ಯಮಾನಿ ಮುಂತಾದವರು ಉಪಸ್ಥಿತರಿದ್ದರು .