ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿ ವಾರ್ಷಿಕ ಮಹಾಸಭೆ: ಭಜನಾ ಸಂಘದ ಅಮೃತ ಮಹೋತ್ಸವಕ್ಕೆ ಸಿದ್ಧತೆ

ಕಾಸರಗೋಡು, : ಶತಮಾನಗಳ ಧಾರ್ಮಿಕ ಪರಂಪರೆಯನ್ನು ಹೊಂದಿರುವ ಕಾಸರಗೋಡು ಸೀಮೆಯ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ರಾಮದಾಸನಗರ ಪೆರ್ನಡ್ಕದ ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕೆ. ಮೋಹನ ಕುಂಬಳೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಲೀಲಾಧರ ಕೂಡ್ಲು, ಅರ್ಚಕ ಶ್ರೀಪತಿ ಅಡಿಗ ಕೂಡ್ಲು, ಉದಯಕುಮಾರ್ ಅಂಬಿಕಾ ರೋಡ್, ಕೆ. ಮನ್ಮಥ ಕೂಡ್ಲು ಹಾಗೂ ಧಾರ್ಮಿಕ ಮುಂದಾಳು ಕೆ. ಜಗದೀಶ ಕೂಡ್ಲು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಶ್ರೀ ಚಾಮುಂಡೇಶ್ವರೀ ಭಜನಾ ಸಂಘದ ಅಮೃತ ಮಹೋತ್ಸವವನ್ನು ಧಾರ್ಮಿಕ ಹಾಗೂ ಭಜನಾ ಸಂಕೀರ್ತನೋತ್ಸವಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು. ಭಜನಾ ಸಂಘದ 75ನೇ ವಾರ್ಷಿಕೋತ್ಸವದ ಅಂಗವಾಗಿ ಧನಸಂಗ್ರಹ ಕೂಪನ್‌ನ್ನು ಅರ್ಚಕ ಶ್ರೀಪತಿ ಅಡಿಗ ಕೂಡ್ಲು ಬಿಡುಗಡೆಗೊಳಿಸಿದರು. ಕೋಶಾಧಿಕಾರಿ ಕೆ. ಮನ್ಮಥ ವಾರ್ಷಿಕ ಆಯವ್ಯಯ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ರೂಪುಗೊಂಡ ಶ್ರೀ ಚಾಮುಂಡೇಶ್ವರೀ ಬಡಾವಣೆ ಅಸೋಸಿಯೇಷನ್‌ನ 35 ಕುಟುಂಬಗಳ ಸದಸ್ಯರನ್ನು ದೇವಸ್ಥಾನದ ಮುಂದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಹ್ವಾನಿಸಿ ಸ್ವಾಗತಿಸಲಾಯಿತು.

ಸಭೆಯಲ್ಲಿ ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ. ಮೋಹನ ಕೂಡ್ಲು, ಉಪಾಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರರಾಗಿ ಕೆ. ಲೀಲಾಧರ ಕೂಡ್ಲು, ಕಾರ್ಯದರ್ಶಿಯಾಗಿ ಪ್ರಕಾಶ್ ಕುಮಾರ್ ಮೂಡುಬಿದ್ರೆ, ಜತೆ ಕಾರ್ಯದರ್ಶಿಯಾಗಿ ಕೆ. ಉದಯಕುಮಾರ್ ಅಂಬಿಕಾರೋಡ್ ಹಾಗೂ ಕೋಶಾಧಿಕಾರಿಯಾಗಿ ಕೆ. ಮನ್ಮಥ ಕೂಡ್ಲು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ. ಯಶವಂತ ಅಂಬಿಕಾರೋಡ್, ಉದಯ ನಾಯ್ಕ್, ಕೆ. ಜಗದೀಶ ಕೂಡ್ಲು, ಕೆ. ಮೂರ್ತಿ, ಪ್ರವೀಣ್ ಕುಮಾರ್, ಸುಜಿತ್ ಕುಮಾರ್ ಹಳೆಮನೆ, ಕೆ. ನಿರಂಜನ ವಾಮಂಜೂರು, ಕೃಷ್ಣಯ್ಯ, ಸುಜನ್ ಕುಮಾರ್, ರಾಜೇಂದ್ರ ಕೆ., ರಾಜು, ಪ್ರೇಮ ಉಮೇಶ್ ರಾವ್, ದಯಾನಂದ ಕೆ., ಪಿ. ನಾರಾಯಣ ನಾಯ್ಕ್ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಶ್ರೀ ಚಾಮುಂಡೇಶ್ವರೀ ಬಡಾವಣೆ ಅಸೋಸಿಯೇಷನ್‌ನ ಚಂದ್ರಕಾಂತ ಕೂಡ್ಲು, ಶಾರದಾ, ವಿದ್ಯಾ, ಪ್ರಶಾಂತ್ ಕೆ., ಸಂತೋಷ್ ಕುಮಾರ್, ಶಶಿಧರ, ರಮೇಶ್, ವಿನೋದ್ ಕುಮಾರ್, ರಾಜೇಶ್, ಹರೀಶ್, ಅರುಣ್ ಕುಮಾರ್, ಚಂದ್ರಕಲಾ ಹಾಗೂ ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಆಡಳಿತ ಮೊಕ್ತೇಸರ ಕೆ. ಲೀಲಾಧರ ಕೂಡ್ಲು ಸ್ವಾಗತಿಸಿದರು. ಪಿ. ನಾರಾಯಣ ನಾಯ್ಕ್ ವಂದಿಸಿದರು.

ಸಭೆಯಲ್ಲಿ ಮಾತನಾಡಿದವರು, ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯವನ್ನು ದಿವಂಗತ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಕೆ. ವೆಂಕಟರಮಣ ಕೂಡ್ಲು ಅಂಬಿಕಾರೋಡ್ ಅವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಅವರ ಸೇವೆಯನ್ನು ಸ್ಮರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!