ಹಟ್ಟಿಯಿಂದ ದನವನ್ನು ಕದ್ದು ದನದ ಮಾಲಕನ ತೋಟದಲ್ಲೇ ಅದನ್ನು ಕೊಂದ ಕಟುಕರನ್ನು ಬಂಧಿಸಿದ ಪೊಲೀಸರು

ಹಟ್ಟಿಯಿಂದ ದನವನ್ನು ಕದ್ದುಕೊಂಡು ಹೋಗಿ ದನದ ಮಾಲಕನ ತೋಟದಲ್ಲೇ ಅದನ್ನು ಕೊಂದು ಅದರ ಕರುಳು ಸಹಿತ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಅಲ್ಲೇ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಇರ್ಷಾದ್ (34), ಮಹಮ್ಮದ್ ಮನ್ಸೂರ್ (48), ಅಬ್ದುಲ್ ಅಝೀಮ್ (18) ಎಂದು ಗುರುತಿಸಲಾಗಿದೆ.


ಅವರು ಸೆ.4ರಂದು ನಸುಕಿನ ವೇಳೆ ಪೆರ್ನೆಯ ಕಡಂಬು ನಿವಾಸಿ ದೇಜಪ್ಪ ಮೂಲ್ಯರ ಹಟ್ಟಿಯಿಂದ ದನವನ್ನು ಕದ್ದು, ದೇಜಪ್ಪ ಮೂಲ್ಯರ ಜಾಗದಲ್ಲೇ ಅದನ್ನು ಕೊಂದು ಅದರ ಹೊಟ್ಟೆಯೊಳಗಿನ ಕರುಳು ಸೇರಿದಂತೆ ತ್ಯಾಜ್ಯವನ್ನು ಹೊರತೆಗೆದು, ಅದನ್ನು ಅಲ್ಲೇ ಎಸೆದು ಹೋಗಿರುವುದಾಗಿ ದೂರಲಾಗಿತ್ತು. ದುಷ್ಕರ್ಮಿಗಳ ಇಂತಹ ಹೀನ ಕೃತ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!