ಮಂಗಳೂರು: ದಕ್ಷಿಣ ಏಷ್ಯಾದಲ್ಲೇ ಪ್ರಥಮ ಅರ್ಥೊಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆಯು ಮಂಗಳೂರಿನ ಯೆನೆಪೋಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ ಎಂದು ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮುಹಮ್ಮದ್ ತಾಹಿರ್ ಹೇಳಿದರು .
ಅವರು ಕೊಡಿಯಾಲ್ ಬೈಲ್ ನಲ್ಲಿರುವ ಯೆನೆಪೋಯ ಆಸ್ಪತ್ರೆ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ , ಇದು ಮಂಡಿ ಬದಲಾವಣೆ ಆಪರೇಷನ್ ನಲ್ಲಿ ಕ್ರಾಂತಿ ಉಂಟುಮಾಡಲಿದೆ . ಏವೊಲ್ಯೂಷನ್ ಮೀಡಿಯಲ್ ಪೈವೊಟ್ ಬೀ ಸಿಸ್ಟಮ್ ಜೊತೆಗೆ ಕೆಲಸ ಮಾಡುವಂತೆ ವಿನ್ಯಾಸಗೊಂಡ ಜಗತ್ತಿನ ಏಕೈಕ ರೊಬೊಟಿಕ್ ಸರ್ಜರಿ ತಂತ್ರಜ್ಞಾನ ಸ್ಕೈವಾಕರ್ ಆರ್ಥೋಪೆಡಿಕ್ ರೊಬೊಟಿಕ್ ಸಿಸ್ಟಮ್ ಆಗಿದೆ ಅಂದರು.
ಸರ್ಜನ್ ಡಾ. ದೀಪಕ್ ರೈ ಮಾತನಾಡಿ , ಭಾರತದ ಮೊದಲ ಸೈವಾಕರ್ ಸರ್ಜರಿಯನ್ನು ಯೆನೆಪೊಯದಲ್ಲಿ ಈಗಾಗಲೇ ಯಶಸ್ವಿಯಾಗಿ ನೆರವೇರಿಸಿದೆ . ಸೈವಾಕರ್ ರೊಬೊಟಿಕ್ ವ್ಯವಸ್ಥೆಯು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ವೇಳೆ ಮಂಡಿಯ ಮರುನಿರ್ಮಾಣಕ್ಕೆ ಸಂಬಂಧಿಸಿದ ಹಾಗೂ ಲಿಗಮೆಂಟ್ ಬ್ಯಾಲೆನ್ಸಿಂಗ್‌ಗೆ ಸಂಬಂಧಿಸಿದ ರಿಯಲ್ ಟೈಮ್ ದತ್ತಾಂಶಗಳನ್ನು ನೀಡುತ್ತದೆ.
ಎವೊಲ್ಯೂಷನ್ ಸಂಸ್ಥೆಯ ಮೀಡಿಯಲ್ ಪೈವೊಟ್ ವಿನ್ಯಾಸವು ಈ ವ್ಯವಸ್ಥೆಗೆ ಸಂಬಂಧಿಸಿದ ಪೇಟೆಂಟ್ ಹೊಂದಿದ್ದು, ಅದು ಮಂಡಿಯ ಸಹಜ ಚಲನೆಗೆ ಬೇಕಾದ ನಿಖರತೆಯನ್ನು ಒದಗಿಸುತ್ತದೆ. ಆರಂಭಿಕ ಕೆಲ ಮಂಡಿ ಬದಲಾವಣೆ ಸರ್ಜರಿಗಳಲ್ಲೇ ನಾವು ಉತ್ತಮ ಫಲಿತಾಂಶವನ್ನು ಕಾಣುತ್ತಿದ್ದೇವೆ’ ಎಂದು ಮಾಹಿತಿ
ಸುದ್ದಿಗೋಷ್ಟಿಯಲ್ಲಿ, ಮೈಕ್ರೋಪೋರ್ಟ್ ಆರ್ಥೋಪೆಡಿಕ್ಸ್ ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ & ಜನರಲ್ ಮ್ಯಾನೇಜರ್ ಡಾ.ಮುಕೇಶ್ ಪಾರ್ಮರ್ ಉಪಸ್ಥಿತರಿದ್ದರು.