ಪಳ್ಳಿಕೆರೆ ದೇವರ ಮನೆ ಶ್ರೀ ರವಳನಾಥ ಅಮ್ಮನವರ ಮಹಿಷಾ ಮರ್ದಿನಿ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಚಂಡಿಕಾಯಾಗ ಪೂರ್ಣ.

ಕಾಸರಗೋಡಿನ ಪಳ್ಳಿಕೆರೆ ಶಕ್ತಿನಗರ ದೇವರಮನೆ ಶ್ರೀ ರವಳನಾಥ ಅಮ್ಮನವರು ಮಹಿಷಮರ್ದಿನೀ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದಲ್ಲಿ ಬ್ರಮ್ಮಕಲಶೋತ್ಸವ ಮತ್ತು ಸಹಸ್ರ ಚಂಡಿಕಾ ಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಿಂದ ಬ್ರಮ್ಮ ಶ್ರೀ ಕುಂಟಾರು ಶ್ರೀ ರವೀಶ್ ತಂತ್ರಿ ಗಳ ನೇತೃತ್ವ ದಲ್ಲಿ ಸಂಪನ್ನ ಗೊಂಡಿತು.


ಮೇ 1 ರ ಗುರುವಾರ ಬೆಳಿಗ್ಗೆಗಣಪತಿ ಹೋಮದ ನಂತರ ವೃಷಭ ಲಗ್ನ ದಲ್ಲಿ ಶ್ರೀ ದೇವರಿಗೆ ಬ್ರಮ್ಮಕಲಾಶಭಿಷೇಕ ನಡೆಯಿತು.
ಮೇ 2 ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ವಿವಿಧ ಧಾರ್ಮಿಕ ವಿಧಿ ವಿಧಾನ ಗಳ ನಂತರ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಪತಿ ಯಾಗ ಆರಂಭಗೊಂಡು ಬೆಳಿಗ್ಗೆ 11 30 ಕ್ಕೆ ಪೂರ್ಣಹುತಿ ನಡೆಯಿತು.
ಮೇ 5 ರಂದು ಬೆಳಿಗ್ಗೆ 8 ಗಂಟೆ ಗೆ ರುದ್ರಯಾಗ ಆರಂಭ ಗೊಂಡು ಮೇ 7 ರಂದು ಸಹಸ್ರ ಚಂಡಿಕಾಯಾಗ ನಡೆಯಿತು.


ಈ ಸಂದರ್ಭದಲ್ಲಿ ನಡೆದ ವಿವಿಧ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಎಡನೀರು ಪಟಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿ, ಬ್ರಹ್ಮಶ್ರೀ ಕುಂಟಾರು ರವಿಶರಂತ್ರಿ ಪರಮಪೂಜ್ಯ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಮಣ್ಯ ಮಠ, ಪರಮಪೂಜ್ಯ ಶ್ರೀಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಅದೋ ಕ್ಷಜ ಪೇಜಾವರ ಮಠ ಉಡುಪಿ, ಶೃಂಗೇರಿ ಶ್ರೀ ಗಳು, ಕೊಂಡೆವೂರ್ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮುಂತಾದ ಯತಿ ಶ್ರೇಷ್ಠರು ಭಾಗವಹಿಸಿದರು. ಸಂಸದ ರಾಜ್ ಮೋಹನ್, ಉಣ್ಣಿತ್ತನ್, ಶಾಸಕ ಎಚ್ ಕುಜ್ಞಂಬು ಮೊದಲಾದವರು ಭಾಗವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈವಿಧ್ಯಗಳು ಯಕ್ಷಗಾನ ಬಯಲಾಟ ನಡೆಯಿತು. ಮೇ ಎಂಟರಂದು ಮಧ್ಯಾಹ್ನ ಗುಳಿಗೆ ದೈವದ ಕೋಲನಡೆಯಿತು

SHARE
Loading spinner

Leave a Reply

Your email address will not be published. Required fields are marked *

error: Content is protected !!