ಮಂಜೇಶ್ವರ : ಮಂಜೇಶ್ವರ ಪಂಚಾಯತು ವ್ಯಾಪ್ತಿಯ ಮಚ್ಚಂಪಾಡಿಯಲ್ಲಿ ಮಹಿಳಾ ಮತ್ತು ಮಕ್ಕಳಿಗಾಗಿ ಮಂಜೇಶ್ವರ ಗ್ರಾಮ ಪಂಚಾಯತಿನ ಅನುಮತಿ ಮೇರೆಗೆ KDB ವತಿಯಿಂದ ಸುಮಾರು 34 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸ್ಮಾರ್ಟ್ ಅಂಗನವಾಡಿ ಕಟ್ಟಡದ ಶಿಲಾನ್ಯಾಸವನ್ನು ಪಂಚಾಯತು ಅಧ್ಯಕ್ಷೆ ಜೀನ್ ಲೆವಿನೋ ಮೊಂತೆರೋ ನಿರ್ವಹಿಸಿದರು.
ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಕ್ ಎಂ ಅಧ್ಯಕ್ಷ ತೆ ವಹಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳಾದ ಕಮಲಾಕ್ಷಿ , ಯಾದವ ಬಡಾಜೆ,ಮುಂತಾಸ್ ಸಮೀರ,ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬೀನಾ ಕೆ, ಪಿ ಎಚ್ ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
ಆಯಿಶತ್ ರುಬೀನ ಸ್ವಾಗತಿಸಿ ಕನಕವಲ್ಲಿ ವಂದಿಸಿದರು