ಬಂಟ್ವಾಳ : ಮಾರ್ಚ್ 29 ರಂದು ಸಂಜೆ ವೇಳೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಪೊಸ್ಕೋ ಕೇಸ್ ನಲ್ಲಿ ಅರೆಸ್ಟ್ ಮಾಡಿದ್ದಾರೆ.ಬಂಧಿತನನ್ನು ಸಂತ್ರಸ್ಥೆ ಬಾಲಕಿಯ ನೆರೆಮನೆವಾಸಿ ಅಬೂಬಕ್ಕರ್ (50) ಎಂದು ಗುರುತಿಸಲಾಗಿದೆ. ಆರೋಪಿ ದಿನಾಂಕ 29.03.2025 ರಂದು ಸಂಜೆ 05.00 ಗಂಟೆ ಸಮಯಕ್ಕೆ ನೊಂದ ಬಾಲಕಿ ಆಟವಾಡುತ್ತಿದ್ದಾಗ ಆಕೆಯನ್ನು ಯಾರು ವಾಸ್ತವ್ಯ ಇರದ ಮನೆಯ ಹಿಂಬಾಗಿಲಿನಲ್ಲಿರುವ ಸಿಟೌಟ್ ಗೆ ಕರೆದುಕೊಂಡು ಹೋಗಿ ಬಲಾತ್ಕಾರವಾಗಿ ಲೈಂಗಿಕಕ್ರಿಯೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನೀಡಿದ ದೂರಿನ ಅನ್ವಯ ಬಂಟ್ವಾಳ ಗ್ರಾಮಾಂತರ ಠಾಣಾ ಅ ಕ್ರ 135/2025 ಕಲಂ: 64 (1), 351(2) BNS ಮತ್ತು 4 (2) PROTECTION OF CHILDREN FROM SEXUAL OFFENCES ACT 2012 ರಂತೆ ಪ್ರಕರಣ ದಾಖಲಾಗಿರುತ್ತದೆ ಆರೊಪಿಯನ್ನು ದಸ್ತಗಿರಿಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಲಯವು ನ್ಯಾಯಾಂಗ ಬಂಧನ ವಿದಿಸಿರುತ್ತದೆ. ಮುಂದುವರಿದು ಈ ವಿಚಾರವಾಗಿ ಆರೋಪಿಗೆ ಜನರು ಹೊಡೆದಿರುತ್ತಾರೆ ಎಂದು ದೂರು ನೀಡಿದ್ದು ಈ ಬಗ್ಗೆ ಅ.ಕ್ರ 136/2025 ಕಲಂ126 (2) 115 (2) 351 (1) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.