ಶ್ರೀ ರಾಮ್ ಫೈನಾನ್ಸ್ ಮಂಗಳೂರು ಇದರ ವತಿಯಿಂದ 1000 ಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ.

ಮಂಗಳೂರು: ನಮ್ಕ ದೇಶದಲ್ಲಿ ಶೇ 65% ರಷ್ಣು ಯುವ ಸಮೂಹವೇ ಇದೆ, ಈ ಯುವ ಸಮೂಹದ ಸಮಯಗಳು ದೇಶ ಕಟ್ಟುವ ಕಾರ್ಯಕ್ಕೆ ವಿನಿಯೋಗ ಆಗಬೇಕೆ ಹೊರತು, ದುರುಪಯೋಗವಾದರೆ ದೇಶಕ್ಕೆ ಮಾರಕ. ಹಾಗಾಗಿ ಯುವಕ ಶಕ್ತಿ ಸದ್ಬಳಕೆ, ಸ್ವಾಭಿಮಾನದ ಜೀವನ ನಮ್ಮ ಸಮಾಜದಲ್ಲಿ ಆಗಬೇಕಾದರೆ ಉಳ್ಳವರು ಮುಂದೆ ಬರಬೇಕು, ವಿದ್ಯಾರ್ಜನೆಗೆ, ನೈತಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು, ವ್ಯವಹಾರದ ತನ್ನ ಪಾಲನ್ನು ಶಿಕ್ಷಣಕ್ಕೆ ನೀಡುತ್ತಿರುವ ಶ್ರೀ ರಾಮ್ ಫೈನಾನ್ಸ್ ನ ಸೇವೆ ನಿಜವಾಗಿಯೂ ಮೆಚ್ಚತಕ್ಕದ್ದು ಎಂದು ದ.ಕ ಜಿಲ್ಲಾ ಸಂಸದರಾದ ಕ್ಯಾ ಬೃಜೇಶ್ ಚೌಟ ಅಭಿಪ್ರಾಯ ಪಟ್ಟರು.


ಅವರು ಶ್ರೀ ರಾಮ್ ಫೈನಾನ್ಸ್ ಮಂಗಳೂರು ಇದರ ವತಿಯಿಂದ ಕುದ್ಮಳ್ ರಂಗರಾವ್ ಪುರಭವನದಲ್ಲಿ 1000 ಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಸಮಾರಂಭದ ಉದ್ಘಾಟನೆಯನ್ನು ಶ್ರೀ ರಾಮ್ ಫೈನಾನ್ಸ್ ನ ಎಕ್ಸಿಕ್ಯೂಟಿವ್ ವೈಸ್ ಚಯರ್ ಮ್ಯಾನ್ ಉಮೇಶ್ ಜಿ ರೇವಣ್ ಕರ್ ನೆರವೇರಿಸಿ ಕಳೆದ 13 ವರ್ಷಗಳಿಂದ ಶ್ರೀ ರಾಮ್ ಫೈನಾನ್ಸ್ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ತಲಾ 4000 ಕಾಲೇಜು ವಿಧ್ಯಾರ್ಥಿಗಳಿಗೆ ತಲಾ 4500 ರೂ ವಿಧ್ಯಾರ್ಥಿವೇತನ ವನ್ನು ಓರ್ವ ವಿಧ್ಯಾರ್ಥಿಗೆ ಕಳಿಕೆಯ 5 ವರ್ಷಗಳ ಕಾಲ ಪ್ರತೀ ವರ್ಷ ನೀಡುತ್ತದೆ ಈ ಮೂಲಕ ಕಲಿಯುವ ಛಲ ಮೂಡಿಸುವ ಕೆಲಸ ಪ್ರತೀ ಜಿಲ್ಲೆಯಲ್ಲಿಯೂ ನಡೆಯುತ್ತದೆ ಎಂದರು.


ಶ್ರೀ ರಾಮ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ಬಿ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಶ್ರೀರಾಮ್ ಫೈನಾನ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀದರ್ ಮಟಮ್, ಅಧ್ಯಕ್ಷ ಶರತ್ ಚ್ಚಂದ್ರ ಭಟ್ ಕಾಕುಂಜೆ, ಕಾಂಚನ ಮೋಟರ್ಸ್ ನ ಆಡಳಿತ ನಿರ್ದೇಶಕ ಪ್ರಸಾದ್ ಕಾಂಚನ್, ದೈಜಿ ವರ್ಲ್ಡ್ ಚಾನೆಲ್ ನ ವಾಲ್ಟರ್ ನಂದಳಿಕೆ, ಕರ್ನಾಟಕ ಏಜೆನ್ಸೀಸ್ ನ ಸಂತೋಷ್ ರಾಡ್ರಿಗಸ್, ಶಾರದಾ ವಿದ್ಯಾಗಣಪತಿ ಶಾಲೆಯ ಸಂಚಾಲಕ ರಾಜರಾಮ್ ಭಟ್, ಚಲನಚಿತ್ರ ನಟಿ ಪೂರ್ಣಿಮ ಎಸ್ ನಾಯಕ್, ಮೈಸೂರು ಇಲೆಕ್ಟ್ರಿಕ್ಸ್ ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್.ವಿ, ಟ್ಯಾಕ್ಸಿ ಮೆನ್ ಅಸೋಸಿಯೇಷನ್ ನ ಆನಂದ, ಲಯನ್ಸ್ ಕ್ಲಬ್ ನ ಡಾ. ಜಿ.ಆರ್. ಶೆಟ್ಟಿ, ವೆಸ್ಟ್ ಕೋಸ್ಟ್ ಮೋಟರ್ಸ್ ನ ಆಡಳಿತ ನಿರ್ದೇಶಕ ಮಹಮ್ಮದ್ ರಫೀಕ್, ಅರವಿಂದ್ ಮೋಟಾರ್ಸ್ ನ ಆಡಳಿತ ನಿರ್ದೇಶಕ ಉದಯ ಎಂ, ದುರ್ಗಾ ಮೋಟರ್ಸ್ ನ ಉದಯ್ ನಾಯಕ್ ಆಗಮಿಸಿದ್ದರು.


ಶ್ರೀ ರಾಮ್ ಫೈನಾನ್ಸ್ ನ ಹಿರಿಯ ಉಪಾಧ್ಯಕ್ಷ ಸತ್ಯನಾರಾಯಣ ಕೆ.ವಿ, ಲೀಗಲ್ ಹೆಡ್ ಉಲ್ಲಾಸ್ ನಾಯ್ಕ್, ರಿಕವರಿ ಹೆಡ್ ನಾಗರಾಜ್ ಬಿ, ಸ್ಟೇಟ್ ಹೆಡ್ ಸದಾಶಿವ ಅಮೀನ್ ಉಪಸ್ಥಿತರಿದ್ದರು.
ರೀಜಿನಲ್ ಬ್ಯಸಿನೆಸ್ ಹೆಡ್ ಚೇತನ್ ಅರಸ್ ಸ್ವಾಗತಿಸಿದರು, ಮಹೇಶ್ ಕುಮಾರ್ ಸಿ.ಹೆಚ್ ವಂದಿಸಿ, ಪ್ರವೀಣ್ ಎಸ್ ಕುಂಪಲ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!