ಮಂಜೇಶ್ವರ : ಬಾಯಾರು ಪೆಟ್ರೋಲ್ ಬಂಕ್ ಮುಂಬಾಗದಲ್ಲಿ ಇಂದು ಬೆಳಿಗ್ಗೆ ಶಾಲಾ ಬಸ್ಸೊಂದು ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಂದು ವಿದ್ಯಾರ್ಥಿ ಸ್ಥಿತಿ ಚಿಂತಾಜನಕವೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಬಾಯಾರು ಪೊನ್ನಂಗಳ ಮುಜಮ್ಮ ಸಶಾಫತ್ ಸುನ್ನಿ ಶಾಲಾ ಬಸ್ಸು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಪೈವಳಿಕೆ ಅಕಾಡೆಮಿಕ್ ಶಾಲೆಯ ಪ್ಲಸ್ 2 ವಿದ್ಯಾರ್ಥಿಗಳಾದ ಸಾದಿಖ್ ಹಾಗೂ ಮೊಯಿನುದ್ದೀನ್ ಅಪಘಾತದಿಂದ ಗಾಯಗೊಂಡಿದ್ದಾರೆ.