ಮಂಗಳೂರು:ರಾಜ್ಯದಲ್ಲಿ ಜಾತಿ ಗಣತಿ ನಡೆಸುವ ವಿಚಾರವಾಗಿ ಹಲವಾರು ಗೊಂದಲಗಳಿದ್ದು ಅದನ್ನು ಪರಿಹರಿಸಿದ ಬಳಿಕ ಜಾತಿ ಗಣತಿ ಮಾಡಿದರೆ ಒಳಿತೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು .
ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಈಗಾಗಲೇ ಮನೆಗಳಲ್ಲಿ ಜಾತಿ ಗಣತಿಯ ಅಂಗವಾಗಿ ಸ್ಟಿಕ್ಕರ್ ಅಂಟಿಸಲಾಗುತ್ತಿದೆ . ಆದರೆ ಜನರಿಗೆ ಈ ಬಗ್ಗೆ ಹಲವು ಗೊಂದಲಗಳಿವೆ . ಜನಜಾಗೃತಿ ಮೂಡಿಸಿದ ನಂತರ ಈ ಸಮೀಕ್ಷೆಯನ್ನು ಕೈಗೊಂಡರೆ ಒಳ್ಳೆಯದಿತ್ತು . ಜಿಲ್ಲಾ ಪಂಚಾಯತ್ ನಲ್ಲಿ ಈ ಬಗ್ಗೆ ಸ್ಪೀಕರ್ ಸಭೆಯನ್ನು ನಡೆಸಿದ್ದಾರೆ . ಸ್ಪೀಕರ್ ಈ ಸಭೆಯನ್ನು ನಡೆಸುವುದು ಸೂಕ್ತವಲ್ಲ . ಇಲ್ಲಿ ಉಸ್ತುವಾರಿ ಸಚಿವರ ಕೆಲಸವನ್ನು ಸ್ಪೀಕರ್ ಮಾಡ್ತಾ ಇದ್ದಾರೆ . ಹಾಗಾಗದೆ ಉಸ್ತುವಾರಿ ಸಚಿವರು ಏನು ಮಾಡ್ತಾ ಇದ್ದಾರೆ . ಇಂದು ಎಲ್ಲಾದ್ದಕ್ಕೂ ಉಸ್ತುವಾರಿ ಸಚಿವರ ಬದಲು ಸ್ಪೀಕರ್ ಉತ್ತರ ಕೊಡುತ್ತಾರೆ . ನಮಗೆ ಈ ಬಗ್ಗೆ ಹಲವು ಅನುಮಾನಗಳಿವೆ .ಸ್ಟಿಕ್ಕರ್ ಅಂಟಿಸಿದ ನಂತರ ಅಧಿಕಾರಿಗಳ ಸಭೆ ಯಾಕೆ ಮಾಡುತ್ತಾರೆ?. ಎಂಬುದೇ ತಿಳಿಯದು .
ಸಮೀಕ್ಷೆಯನ್ನು ಗೊಂದಲದಲ್ಲಿ ಪ್ರಾರಂಭಿಸಿದ್ದಾರೆ . ತರಾತುರಿಯಲ್ಲಿ ಸಮೀಕ್ಷೆ ನಡೆಸುವ ಅಗತ್ಯ ಈ ನವರಾತ್ರಿಯ ರಜೆಯ ಸಮಯದಲ್ಲಿ ಇತ್ತೇ ? . ಆತುರವಾಗಿ ಯಾಕೆ ಸಮೀಕ್ಷೆಯನ್ನು ಕೈಗೊಳ್ಳಬೇಕು ? . ಇಂದು ಸರಕಾರ ಪ್ರಕಟಿಸಿದ 47 ಉಪಜಾತಿಗಳ ಮುಂದೆ ಇರುವ ಕ್ರಿಶ್ಚಿಯನ್ ಪದವನ್ನು ತೆಗೆಯಬೇಕು . ಇದರಿಂದ ಬೇರೆ ಬೇರೆ ರೀತಿಯಲ್ಲಿ ಸಮಸ್ಯೆ ಗೊಂದಲಗಳು ಉಂಟಾಗುತ್ತದೆ . ಸರಕಾರ ಆದಷ್ಟು ಬೇಗನೇ
ಗೊಂದಲ ನಿವಾರಿಸಿ ಸಮೀಕ್ಷೆಯನ್ನು ಕೈಗೊಳ್ಳಬೇಕು .
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಮಾತನಾಡಿ , ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಬೇಕಾದ ಸಭೆಯನ್ನು ಸ್ಪೀಕರ್ ನಡೆಸುತ್ತಿದ್ದಾರೆ . ಸ್ಪೀಕರ್ ಗೆ ಈ ರೀತಿಯ ಸಭೆ ನಡೆಸಲು ಅವಕಾಶ ಇಲ್ಲ .
ಕೆಂಪುಕಲ್ಲು, ಜಾತಿಗಣತಿ ಬಗ್ಗೆ ಸ್ಪೀಕರ್ ಮಾತನಾಡುತ್ತಾರೆ . ಗುಂಡೂರಾವ್ ರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದು ಯಾಕೆ? ಗುಂಡೂರಾವ್ ರನ್ನು ಸ್ಪೀಕರ್ ಆಗಿ ನೇಮಿಸಿ ಖಾದರ್ ಸಚಿವರಾಗಲಿ ಎಂದರು .
ರಾಜ್ಯ ಸರ್ಕಾರ ಇಂದು ಗೊತ್ತಿಲ್ಲದೇ ಮನೆಗೆ ಸ್ಟಿಕ್ಕರ್ ಅಂಟಿಸುತ್ತಿದೆ . ಮೊದಲು ಜಾತಿಗಣತಿ ಕುರಿತು ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು . ಆ ಕೆಲಸ ಆಗ್ತಾ ಇಲ್ಲ . ಸರ್ಕಾರ ಮೂರ್ಖರ ರೀತಿಯಲ್ಲಿ ಆಡಳಿತ ಮಾಡುತ್ತಿದೆ . ಕ್ರಿಶ್ಚಿಯನ್ ಬಿಲ್ಲವ , ಗೌಡ ಬಿಲ್ಲವ ಎಂದು ಗೊಂದಲ ಮೂಡಿಸಿ ಹಿಂದೂಗಳನ್ನು ಸಿದ್ದರಾಮಯ್ಯರ ಸರಕಾರ ಒಡೆಯುತ್ತಿದೆ ಎಂದು ಕಾಮತ್ ಆಕ್ರೋಶ ವ್ಯಕ್ತಪಡಿಸಿದರು . ಇದು ಹಿಂದೂ ಸಮಾಜದ ಎಲ್ಲಾ ಜಾತಿಗಳನ್ನು ಒಡೆದು ಹಾಕುವ ಷಡ್ಯಂತ್ರದ ಭಾಗವಾಗಿದೆ ಎಂದರು .ಸುದ್ದಿಗೋಷ್ಠಿಯಲ್ಲಿ ಪ್ರೇಮಾನಂದ ಶೆಟ್ಟಿ , ಸಂಜಯ್ ಪ್ರಭು , ನಿತಿನ್ ಕುಮಾರ್ , ರವಿಶಂಕರ್ ಮಿಜಾರು ಮುಂತಾದವರು ಉಪಸ್ಥಿತತರಿದ್ದರು .