ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಡೆಯವರು ಆರ್ಥಿಕ ನೆರವನ್ನು ನೀಡಿದ್ದಾರೆ. ಇಂದು ಬೆಳಗ್ಗೆ ಕ್ಷೇತ್ರ ಪರಿಸರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು ಹಾಗು ಜನಜಾಗ್ರತಿಯ ಪ್ರಮುಖರು ರೂ.5 ಲಕ್ಷ ಡಿ.ಡಿ ಯನ್ನು ಕ್ಷೇತ್ರ ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟತೋಡಿ ಮಾತನಾಡಿ ನಿವೇದನೆಗಾಗಿ ಕ್ಷೇತ್ರದಿಂದ ಧರ್ಮಸ್ಥಳಕ್ಕೆ ಹೋದಾಗ ಬಹಳ ಒತ್ತಡದ ನಡುವೆಯೂ ನಮ್ಮ ನಿವೇದನೆಯನ್ನು ಆಲಿಸಿದ ಖಾವಂದರು ಸಹಾಯದ ಬರವಸೆಯನ್ನ ನೀಡಿದ್ದರು ಅಲ್ಲದೆ ದೊಡ್ಡ ಮೊತ್ತವನ್ನೇ ನೀಡಿದ್ದಾರೆ ಎಂದರು , ಧರ್ಮಸ್ಥಳದ ಈ ನೆರವನ್ನು ಕ್ಷೇತ್ರ ಸಮಿತಿಗೆ ಒಪ್ಪಿಸಲು ಬಂದಿರುವ ಗ್ರಾಮಾಭಿವೃದ್ಧಿ ಯೋಜನಾ ಅಧಿಕಾರಿ ಶ್ರೀಮತಿ ಶಶಿಕಲಾ ಮಾತನಾಡಿ ಸಾದಾರಣವಾಗಿ ಕ್ಷೇತ್ರಗಳಿಗೆ ನೀಡುವ ಧನಸಹಾಯವನ್ನು ಕ್ಷೇತ್ರ ಅಧಿಕಾರಿಗಳನ್ನು ಕರೆಸಿಕೊಂಡು ದರ್ಮಸ್ತಳದಲ್ಲೇ ಸ್ವತಃ ಕಾವೆಂದರೆ ನೀಡುವುದು ವಾಡಿಕೆ ಆದರೆ ಈ ಕಾರ್ಯವನ್ನು ನಮಗೆ ನೀಡಿರುವುದು ಮತ್ತು ಆ ಮುಕೇನ ಶ್ರೀ ಕನಿಲಾ ಕ್ಷೇತ್ರಕ್ಕೆ ಸಂದರ್ಶಿಸುವ ಭಾಗ್ಯವು ಲಭಿಸಿತು ಎಂದರು.
ಬಳಿಕ ಮಾತನಾಡಿದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ ಅವರು ಧರ್ಮಸ್ಥಳ ಈಗಿನ ಪರಿಸ್ಥಿಯಲ್ಲಿಯೂ ಕೂಡ ನಮ್ಮ ನಿವೇದನೆಗೆ ಸ್ಪಂದಿಸಿದ ಖಾವಂದರಿಗೆ ವಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋಪಾಲ ಶೆಟ್ಟಿ ಅರಿಬೈಲ್ ,ಶ್ರಮತಿ ಶಶಿಕಲಾ,ಶ್ರೀಮತಿ ವಾರಿಜ ,ಅಶ್ವಥ್ ಪೂಜಾರಿ ಲಾಲ್ಬಾಗ್ , ದಿನೇಶ್ ಚೆರುಗೋಳಿ,ರಾಮಕೃಷ್ಣ ಸಂತಡ್ಕ , ಕಾರ್ನಾವರು,ಆಚಾರಪಟ್ಟವರು, ಗುರಿಕಾರರು ,ವಿಶ್ವನಾಥ್ ಕುದುರು,ಪದ್ಮನಾಭ ಕಡಪ್ಪರ, ಅಡ್ವಕೇಟ್ ನವೀನ ರಾಜ್ , ಆದರ್ಶ್ ಬಿ.ಎಂ ಆಡಳಿತ ಸಮಿತಿ ಹಾಗೂ ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.